• Slide
    Slide
    Slide
    previous arrow
    next arrow
  • ಎಂಎಂ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನ, ಸಂಗೀತ ದಿನಾಚರಣೆ

    300x250 AD

    ಶಿರಸಿ: ವಿಶ್ವ ಯೋಗದಿನದ ಅಂಗವಾಗಿ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 7 ಗಂಟೆಗೆ ಯೋಗಾಭ್ಯಾಸ ವನ್ನು ನಡೆಸಲಾಯಿತು. ಹರ್ಷಿತಾ ಚಂದಾವರ್ ಯೋಗಾಭ್ಯಾಸ ಹೇಳಿಕೊಟ್ಟರು. ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್ ಹಳೆಮನೆ, ಪ್ರಾಧ್ಯಾಪಕರು,ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿಗಳು ಯೋಗ ಮಾಡಿದರು.

    ನಂತರ ವಿಶ್ವ ಸಂಗೀತ ದಿನದ ಅಂಗವಾಗಿ ಐ.ಕ್ಯೂ.ಎ.ಸಿ ಸಂಯೋಜನೆಯಲ್ಲಿ  ‘ರಾಗ ಯೋಗ’ ಕಾರ್ಯಕ್ರಮವನ್ನು ಸಂಗೀತ ವಿಭಾಗ ಆಯೋಜಿಸಿತ್ತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ಯೋಗ ಮತ್ತು ಸಂಗೀತ ಮನುಷ್ಯನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತದೆ. ಪ್ರಪಂಚಕ್ಕೆ ನಾವು ಯೋಗ ಮತ್ತು ಸಂಗೀತವನ್ನು ಕೊಡುಗೆಯಾಗಿ ನೀಡಿದ್ದೇವೆ. ಸಂಗೀತಕ್ಕೆ ರೋಗ ಗುಣಪಡಿಸುವ ಶಕ್ತಿ ಇದೆ. ಈ ಭಾಗದಲ್ಲಿ ಅನೇಕ ಉದ್ಯೋನ್ಮುಖ ಕಲಾವಿದರು ಹುಟ್ಟಿಕೊಳ್ಳುತ್ತಿದ್ದಾರೆ. ಸಂಗೀತ ಮನಃಶಾಂತಿ ನೀಡುವುದಲ್ಲದೆ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಜೊತೆಗೆ ಸಂಸ್ಕಾರವನ್ನು ನೀಡುತ್ತದೆ ಎಂದು ಹೇಳಿದರು. 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂಇಎಸ್ ಅಧ್ಯಕ್ಷರಾದ ಜಿ.ಎಂ. ಹೆಗಡೆ  ಮುಳಖಂಡ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

                 ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಎಸ್ ಹಳೆಮನೆ ಮಾತನಾಡಿ ಸಂಗೀತ ಕೇವಲ ಕಲಿಕೆ ಮಾತ್ರವಲ್ಲ ಇದು ಸಂಸ್ಕಾರವನ್ನು ನೀಡುತ್ತದೆ ವಿದ್ಯೆ 

    300x250 AD

      ಜೊತೆಗೆ ವಿನಯವಂತಿಕೆಯು ಅವಶ್ಯಕವಾಗಿದೆ. ಕೇವಲ ಕಲಾವಿ ಭಾಗದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ಕಲಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

             ಕಾರ್ಯಕ್ರಮದಲ್ಲಿ ಖ್ಯಾತ ಸಿತಾರ ವಾದಕ ಉಸ್ತಾದ್ ಮೋಸಿನ್ ಖಾನ್ ಹಾಗೂ ಖ್ಯಾತ ತಬಲ ವಾದಕ ಸಚಿನ್ ಕಚೋಟಿ ಹಾಗೂ ಆರ್ ಎನ್ ಹೆಗಡೆ ಬಂಡಿಮನೆ ಉಪಸ್ಥಿತರಿದ್ದರು.

             ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ ಕೆ ಜಿ ಭಟ್ ಸ್ವಾಗತಿಸಿ ವಂದಿಸಿದರು. ನಂತರ ಖ್ಯಾತ ಕಲಾವಿದರುಗಳಿಂದ ಸಿತಾರ ವಾದನ, ಗಾಯನ ಕಾರ್ಯಕ್ರಮ  ನೆರೆದ ಪ್ರೇಕ್ಷಕರನ್ನು ರಂಜಿಸಿತು.

    Share This
    300x250 AD
    300x250 AD
    300x250 AD
    Leaderboard Ad
    Back to top