ಕುಮಟಾ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ಫಾಸ್ಟ್ಫುಡ್ ಸ್ಟಾಲ್ ಉದ್ಯಮಿ ತರಬೇತಿ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಪ್ರಬಂಧಕ ಅಲೋಕ ತಿವಾರಿ ಉದ್ಘಾಟಿಸಿದರು
ನಂತರ ಮಾತನಾಡಿದ ಅವರು ಇಂದಿನ ದಿನದಲ್ಲಿ ಫಾಸ್ಟ್ಫುಡ್ ಉದ್ಯಮಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ಉದ್ಯಮವನ್ನು ಕಡಿಮೆ ಬಂಡವಾಳದಿ0ದ ಹೆಚ್ಚಿನ ಆದಾಯವನ್ನು ಸಂಪಾದಿಸಬಹುದು. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.
ಕುಮಟಾ ಕೆನರಾ ಬ್ಯಾಂಕ್ ಮಾರ್ಕೆಟಿಂಗ್ ಮಾನೇಜರ್ ಚಂದನ ಮಾತನಾಡಿ, ಸ್ವ ಉದ್ಯೋಗ ಶ್ರೇಷ್ಠವಾದ ಉದ್ಯೋಗ. ಮಾಡುವ ಉದ್ಯೋಗದಲ್ಲಿ ಶ್ರದ್ಧೆ, ಆಸಕ್ತಿ ಮತ್ತು ತಾಳ್ಮೆ ಬಹಳ ಮುಖ್ಯವೆಂದು ಹೇಳಿದರು. ತರಬೇತಿ ಸಂಸ್ಥೆಯ ನಿರ್ದೇಶಕ ರಾಜು ಕಲ್ಲಪ್ಪ ಮತನಾಡಿ, ನಮ್ಮ ಸಂಸ್ಥೆಯಲ್ಲಿ ಶಿಬಿರಾರ್ಥಿಗಳಿಗೆ ನಾವು ಆಟ ಮತ್ತು ಪಾಠಗಳ ಮೂಲಕ ತರಬೇತಿಯನ್ನು ನೀಡುತ್ತೇವೆ. ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಿ ಶಿಬಿರಾರ್ಥಿಗಳಿಗೆ ಜೀವನದಲ್ಲಿ ಒಳ್ಳೆಯ ಯಶಸ್ವಿ ಉದ್ಯಮಿಗಳನ್ನಾಗಿ ಮಾಡುತ್ತೇವೆ ಎಂದರು.
ಆರOಭದಲ್ಲಿ ಸಂಸ್ಥೆಯ ಉಪನ್ಯಾಸಕ ಗೌರೀಶ ನಾಯ್ಕ ಆಗಮಿಸಿ ಗಣ್ಯರನ್ನು ಸ್ವಾಗತಿಸಿದರು ಮತ್ತು ಉಪನ್ಯಾಸಕಿ ಮಮತಾ ನಾಯ್ಕ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ನೀನಾ ಶೆಟ್ಟಿ ಉಪಸ್ಥಿತರಿದ್ದರು.