Slide
Slide
Slide
previous arrow
next arrow

ಗಂಗಾವಳಿ ಶಾಲೆ ಶಿಥಿಲ: ಪರಿಶೀಲನೆ ನಡೆಸಿದ ಶಿಕ್ಷಣಾಧಿಕಾರಿ

300x250 AD

ಗೋಕರ್ಣ: ಇಲ್ಲಿಯ ಸಮೀಪದ ಗಂಗಾವಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳನ್ನು ಯುವಕ ಸಂಘದ ಕಟ್ಟಡ ಹಾಗೂ ಸ್ಥಳೀಯರು ನಿರ್ಮಿಸಿಕೊಟ್ಟ ತಗಡಿನ ಛಾವಣಿಯಲ್ಲಿ ಕಲಿಸುತ್ತಿದ್ದರು. ಈ ವಿಷಯ ಪತ್ರಿಕೆಯಲ್ಲಿ ಬರುತ್ತಿದ್ದಂತೆಯೇ ಕುಮಟಾ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಸ್ಥಳಕ್ಕೆ ಆಗಮಿಸಿ ಇಲ್ಲಿಯ ಸ್ಥಿತಿಗತಿಗಳನ್ನು ಗಮನಿಸಿದರು.

ಈ ಶಾಲೆಯಲ್ಲಿ 155 ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಉತ್ತಮ ಕಟ್ಟಡದ ಅವಶ್ಯಕತೆಯಿದೆ. ಈಗಿರುವ ಶಾಲೆಯ ಕಟ್ಟಡ ಹಳೆಯದಾಗಿದ್ದು ಕುಸಿದು ಬೀಳುವ ಆತಂಕವಿದೆ ಎಂದು ಸ್ಥಳೀಯರೇ ಯುವಕ ಸಂಘದ ಕಟ್ಟಡದಲ್ಲಿ ಮತ್ತು ತಾತ್ಕಾಲಿಕ ಶೆಡ್ ನಿರ್ಮಿಸಿ ಮಕ್ಕಳ ಬೋಧನೆಗೆ ತೊಂದರೆಯಾಗದ0ತೆ ನೋಡಿಕೊಂಡಿದ್ದರು. ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗೆ ತೆರಳುತ್ತಿರುವ ಸಂದರ್ಭದಲ್ಲಿಯೂ 155 ವಿದ್ಯಾರ್ಥಿಗಳು ಇಲ್ಲಿ ಓದುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಶಿಕ್ಷಣ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಶಾಲಾ ಕಟ್ಟಡದ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇರುವುದು ಸಾರ್ವಜನಿಕರ ಮತ್ತು ಪಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು.

300x250 AD

ಇಲ್ಲಿರುವ ಎಲ್ಲ ಕಟ್ಟಡಗಳನ್ನು ಸುಸಜ್ಜಿತವಾಗಿ ನಿರ್ಮಿಸಿಕೊಡಬೇಕು ಮತ್ತು ವಿದ್ಯಾರ್ಥಿಗಳಿಗೆ ತಕ್ಕಂತೆ ಶಿಕ್ಷಕರ ನಿಯೋಜನೆಯನ್ನು ತಕ್ಷಣಕ್ಕೆ ಮಾಡಬೇಕು ಎಂದು ಸ್ಥಳಕ್ಕೆ ಆಗಮಿಸಿದ ಶಿಕ್ಷಣಾಧಿಕಾರಿ ಆರ್.ಎಲ್. ಭಟ್ ಅವರಲ್ಲಿ ಸ್ಥಳೀಯ ಪ್ರಮುಖರಾದ ಚಂದ್ರಶೇಖರ ನಾಯ್ಕ, ಸದಾನಂದ ನಾಯ್ಕ, ಸತೀಶ ನಾಯ್ಕ ಸೇರಿದಂತೆ ಹಲವರು ಶಿಕ್ಷಣಾಧಿಕಾರಿಗಳಲ್ಲಿ ವಿನಂತಿಸಿಕೊoಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಿಕ್ಷಣಾಧಿಕಾರಿ ಆರ್.ಎಲ್. ಭಟ್ ಮಾತನಾಡಿ, ಆದಷ್ಟು ಶೀಘ್ರ ಇಲ್ಲಿಯ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

Share This
300x250 AD
300x250 AD
300x250 AD
Back to top