Slide
Slide
Slide
previous arrow
next arrow

ಮಾರುತಿ ವಸತಿ ವಿದ್ಯಾಲಯದಲ್ಲಿ ಪಿಯು ತರಗತಿಗಳ ಶುಭಾರಂಭ

300x250 AD

ಹೊನ್ನಾವರ: ಶ್ರೀಮಾರುತಿ ರೆಸಿಡೆನ್ಶಿಯಲ್ ಸ್ಕೂಲ್‌ನ ಪಿ.ಯು.ಸಿ. ತರಗತಿಗಳು ಅಮೃತಗಳಿಗೆಯ ಶುಭ ಮುಹೂರ್ತದಲ್ಲಿ ಆರಂಭಗೊoಡಿತು.
ಸಮಾರoಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಾರುತಿ ಗುರೂಜಿಯವರು ವಹಿಸಿದ್ದು, ಮುಖ್ಯ ಅಭ್ಯಾಗತರಾಗಿ ವಿದ್ವತ್ ಅಕಾಡೆಮಿ ಆಪ್ ಸೈನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಅರುಣ್‌ಕುಮಾರ್ ಬಿ. ಎಸ್. ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಅರ್ಪಿತಾ ಮಾರುತಿ ಗುರೂಜಿ ಉಪಸ್ಥಿತರಿದ್ದು ದೀಪ ಪ್ರಜ್ವಲನೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅಭ್ಯಾಗತ ಅರುಣ್‌ಕುಮಾರ್ ಬಿ.ಎಸ್., ಸಿ.ಬಿ.ಎಸ್.ಇಯ ಮಹತ್ವ ಮತ್ತು ಪ್ರಸ್ತುತ ಶಿಕ್ಷಣದಲ್ಲಿ ಅದರ ಪ್ರಸ್ತುತತೆ ಹಾಗೂ ಅನಿವಾರ್ಯತೆಯ ಕುರಿತು ವಿವರವಾಗಿ ತಿಳಿಸಿದರು. ಅಲ್ಲದೇ ನೀಟ್, ಜೀ ಮತ್ತು ಸಿಇಟಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವುದರೊಂದಿಗೆ ಶುಭ ಹಾರೈಸಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮಾರುತಿ ಗುರೂಜಿಯವರು ಶಿಕ್ಷಣದ ಮಹತ್ವವನ್ನು ತಿಳಿಸುವುದರ ಜೊತೆಗೆ ಮುಂದಿನ ಭವಿಷ್ಯವನ್ನು ಸುಂದರವಾಗಿ ರೂಪಿಸುವ ಶಿಕ್ಷಣವನ್ನು ನಮ್ಮ ಸಂಸ್ಥೆಯಲ್ಲಿ ನೀಡುತ್ತಿರುವ ಹಾಗೂ ಮುಂದೆ ನೀಡಲಿರುವ ಸೌಲಭ್ಯಗಳ ಕುರಿತು ವಿಸ್ತೃತವಾಗಿತಿಳಿಸುವುದರೊಂದಿಗೆ ಸರ್ವರಿಗೂ ಶುಭಾಶೀರ್ವದಿಸಿದರು.
ಇದೇ ಶುಭಾವಸರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಶಿಕ್ಷಕ ಮಂಜುನಾಥ ಗೌಡ ಇವರು ಸ್ವಾಗತಿಸಿ, ಸಂಸ್ಥೆಯ ಆಡಳಿತ ನಿರ್ದೇಶಕ ಜಿ.ಟಿ.ಹೆಗಡೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಉಪನ್ಯಾಸಕ ಲೋಕೇಶ್ ನಾಯ್ಕ ಅವರು ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿಯಾದ ಆಶಾ ಹರಿಕಾಂತ ಅವರು ನಿರ್ವಹಿಸಿದರು. ಸಮಾರಂಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕವೃಂದ, ಕ್ಷೇತ್ರದ ಭಕ್ತವೃಂದ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಕಾರ್ಯಕ್ರಮದ ಮೆರುಗನ್ನು ಇಮ್ಮಡಿಯಾಗಿಸಿದರು.

300x250 AD
Share This
300x250 AD
300x250 AD
300x250 AD
Back to top