ಸಿದ್ದಾಪುರ: ಉ.ಕ ವಿಭಾಗದಿಂದ ಸಾರಿಗೆ ಇಲಾಖೆಗೆ ಅತ್ಯುತ್ತಮ ಆದಾಯ ತರುತ್ತಿದ್ದ ಭಟ್ಕಳ – ತಿರುಪತಿ ಹಾಗೂ ಕುಮಟಾ – ತಿರುಪತಿ ಬಸ್ ಕಳೆದ ಕೆಲವು ದಿನಗಳಿಂದ ರದ್ದುಮಾಡಲಾಗಿದೆ. ಇದರಿಂದ ಈ ಭಾಗದ ಪ್ರಯಾಣಿಕರಿಗೆ ತೀವ್ರ ತರಹದ ತೊಂದರೆ ಉಂಟಾಗಿದೆ.ಈ ಎರಡು ಮಾರ್ಗವನ್ನು ತಕ್ಷಣ ಪುನಃ ಆರಂಭಿಸಬೇಕು ಎಂದು ನವಜಾಗ್ರತ ವೇದಿಕೆಯ ಮರನಾಥ ವಿ.ಭಟ್ಟಿ ಸಾರಿಗೆ ಇಲಾಖೆಯ ಎಂ.ಡಿ ಅವರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು ಬೆಳಿಗ್ಗೆ 10ಘಂಟೆಯ ಸಿರ್ಸಿ ಸಿದ್ದಾಪುರ ಬೆಂಗಳೂರು ,ಇನ್ನಿತರ ಬಸ್ಸುಗಳು ರದ್ದಾಗಿವೆ.ಇದರಿಂದ ನಿತ್ಯ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿರುವುದು ಸತ್ಯ. ಇದು ನಿಮ್ಮ ಅಸಹಕಾರಕ್ಕೆ ಹಿಡಿದ ಕೈ ಗನ್ನಡಿ .4 ವರ್ಷಗಳಿಂದ ಸಿಬ್ಬಂದಿ ನೇಮಕ ಮಾಡಿಕೊಳ್ಳದೆ, ನೂತನ ಬಸ್ಸುಗಳು ಖರೀದಿ ಮಾಡದೆ ಕೆಳವರ್ಗದ ಅಧಿಕಾರಿಗಳಿಗೆ ಸಹಕಾರ ನೀಡದಿದ್ದರೆ ಅವರು ತಮ್ಮ ಕರ್ತವ್ಯ ಹೇಗೆ ಅಚ್ಚುಕಟ್ಟಾಗಿ ನಿಭಾಯಿಸಿಯಾರು.ಕೂಡಲೇ ಕೇಂದ್ರ ಕಚೇರಿಯಿಂದ ತಾವುಗಳು ಉ. ಕ ವಿಭಾಗಕ್ಕೆ ಎಲ್ಲ ರೀತಿಯ ಸಹಕಾರ ನೀಡಿ ಹಿಂದುಳಿದ ಜಿಲ್ಲೆಯ ಸಾಮಾನ್ಯ ನಿತ್ಯ ಬಡ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಮುಖೇನ ಆಸರೆಯಾಗಬೇಕೆಂದು ವಿನಂತಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.