Slide
Slide
Slide
previous arrow
next arrow

ಆರೋಗ್ಯ ಇಲಾಖೆಯ ಕುಂದು- ಕೊರತೆ ಆಲಿಸಿದ ಸಚಿವ ಮಂಕಾಳ ವೈದ್ಯ

300x250 AD

ಹೊನ್ನಾವರ: ತಾಲೂಕು ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಜರುಗಿತು.

ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಿ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಬಗ್ಗೆ ಪ್ರಶ್ನಿಸಿದರು. ಸೋಮವಾರದಿಂದ ವೈದ್ಯರು ಸೇವೆಗೆ ಲಭ್ಯವಿರುವ ಮಾಹಿತಿ ಅಧಿಕಾರಿಗಳು ನೀಡಿದರು. ತಾಲೂಕಿನ ಹಲವು ಆರೊಗ್ಯ ಕೇಂದ್ರದ ಮೇಲ್ಚಾವಣೆ ಶೀಥಿಲಾವಸ್ಥೆ ತಲುಪಿದೆ. ಮಳೆಗಾಲದಲ್ಲಿ ಸೋರುತ್ತಿದೆ. ಕಟ್ಟಡ ರಿಪೇರಿ ಅಗತ್ಯವಿದೆ. ಶೌಚಾಲಯ ಸಮಸ್ಯೆ, ಸಿಬ್ಬಂದಿ ಕೊರತೆ, ಸೇರಿದಂತೆ ಆಸ್ಪತ್ರೆ ಮೂಲಭೂತ ಸಮಸ್ಯೆಯನ್ನು ತಾಲೂಕ ಆಡಳಿತ ವೈದ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಸಚಿವರ ಗಮನಕ್ಕೆ ತಂದರು. ಕೂಡಲೇ ಜಿ.ಪಂ. ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಶೌಚಾಲಯ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲು ನೀಲಿ ನಕ್ಷೆ ಸಿದ್ಧಪಡಿಸಬೇಕು. ಆಸ್ಪತ್ರೆಗೆ ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿ ಆಗಮಿಸುವುದರಿಂದ ಆರೋಗ್ಯ ಕೇಂದ್ರದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಔಷಧಿ ಹೊರಗಿನಿಂದ ತರಲು ಸಾರ್ವಜನಿಕರಿಗೆ ಹೇಳಬಾರದು. ಅಗತ್ಯವಿರುವ ಔಷಧಿಯನ್ನು ಸರ್ಕಾರ ವಿತರಿಸಲಿದೆ ಎಂದು ಖಡಕ್ ಸೂಚನೆ ನೀಡಿದರು. ಸಾರ್ವಜನಿಕರು ನಿಮ್ಮ ಇಲಾಖೆಯಿಂದ ಸೇವೆಗೆ ಕಷ್ಟದ ಸಮಯದಲ್ಲಿ ಆಗಮಿಸುತ್ತಾರೆ. ಅವರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಅವರಿಂದ ದೂರುಗಳು ಬರದ ರೀತಿಯಲ್ಲಿ ಸೇವೆ ನೀಡುವಂತೆ ಸೂಚಿಸಿದರು. ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಯವರಿಗೆ ವಸತಿಗೃಹದ ಸಮಸ್ಯೆ ಇದೆ. ಓ.ಪಿ.ಡಿ ಮೂಲಕ ಸಾರ್ವಜನಿಕರಿಗೆ ಸೇವೆ ಸ್ವೀಕರಿಸಲು ಸ್ಥಳವಕಾಶದ ಕೊರತೆ ಇದೆ. ಕೆ.ಎಫ್.ಡಿ ಕಟ್ಟಡ ನಿರ್ಮಾಣ, ಶವಗಾರ ಕಟ್ಟಡ ಮತ್ತು ಮೇಲ್ಛಾವಣೆಯಲ್ಲಿ ಪ್ರತೈಕ ರೋಗಿಗಳ ಕೊಠಡಿ ನಿರ್ಮಾಣ, ಸಿಬ್ಬಂದಿಗಳ ಕೊರತೆಯ ಬೇಡಿಕೆಯನ್ನು ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಮನವಿ ಮಾಡಿದರು. ಹಲವು ಬೇಡಿಕೆ ಮನ್ನಿಸಿದ ಸಚೀವರು ಸಮಸ್ಯೆಯನ್ನು ಹಂತಹ0ತವಾಗಿ ಬಗೆಹರಿಸುದಾಗಿ ತಿಳಿಸಿದರು.
ಗೇರುಸೊಪ್ಪಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಜೊತೆ ಆ ಭಾಗದಲ್ಲಿ ಹೆಚ್ಚಿನ ಅಪಘಾತ ಸಂಭವಿಸುದರಿoದ ತುರ್ತು ಸೇವೆ ನೀಡಲು ಅಂಬುಲೆನ್ಸ ನೀಡುವ ಕುರಿತು ಸಭೆಯಲ್ಲಿ ಚರ್ಚೆಯಾಯಿತು. ಡೈವರ್ ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು ಸೇವೆ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು ಇಲಾಖರಯವರು ಚಾಲಕರ ಸಂಬಳ ನೀಡುದಾದರೆ ಅಂಬುಲೆನ್ಸ ನೀಡುವ ಭರವಸೆ ನೀಡಿದರು. ತಾಲೂಕಿನಲ್ಲಿ ಆರೊಗ್ಯ ಸೇವೆ ನೀಡುವ ಕುರಿತು ಡಾ.ಪ್ರಕಾಶ ನಾಯ್ಕ, ಡಾ.ಕೃಷ್ಣಾಜಿ ಮಾಹಿತಿ ನೀಡಿ ಉತ್ತಮ ಸೇವೆ ಮುಂದುವರೆಸುದಾಗಿ ತಿಳಿಸಿದರು. ಸಿಬ್ಬಂದಿಯೊರ್ವರು ಮಾತನಾಡಿ 32 ಸಿಬ್ಬಂದಿಗಳಿಗೆ 4 ಕ್ವಾಟರ್ಸ್ ಇದ್ದು, ಅದು ಸೂಕ್ತ ವ್ಯವಸ್ಥೆಯಿಂದ ಕೂಡಿರದ ಬಗ್ಗೆ ಮಾಹಿತಿ ನೀಡಿದಾಗ ಕೂಡಲೇ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.

300x250 AD

ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ಕೊರತೆ ಬಗ್ಗೆ ಸಚೀವರ ಗಮನಕ್ಕೆ ಅಧಿಕಾರಿಗಳು ತಂದಾಗ ಹೊರಗುತ್ತಿಗೆ ಮೇಲೆ ಯಾವ ಹುದ್ದೆ ತೆಗೆದುಕೊಳ್ಳಬಹುದು ಎಂದು ಜಿಲ್ಲಾ ಆರೊಗ್ಯಧಿಕಾರಿಗಳಿಂದ ಮಾಹಿತಿ ಪಡೆದು ಮಾಧ್ಯಮದವರ ಮೂಲಕ ಪ್ರಚಾರ ಮಾಡಿ ಸ್ಥಳಿಯರಿಗೆ ಉದ್ಯೋಗ ನೀಡುವಂತೆ ಅಧಿಕಾರಿಗಳಿಗೆ ಸಚೀವ ಮಂಕಾಳ ವೈದ್ಯ ಸೂಚಿಸಿದರು.
ಸಚಿವರನ್ನು ತಾಲೂಕ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಇ.ಓ. ಸುರೇಶ ನಾಯ್ಕ, ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top