ಕುಮಟಾ: ಪಟ್ಟಣದ ಚಿತ್ರಗಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅವರು ಉಚಿತ ಸ್ಕೂಲ್ ಬ್ಯಾಗ್ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು.
ಉದ್ಯಮಿ ಸುಬ್ರಾಯ ವಾಳ್ಕೆಯವರ ಅನುಪಸ್ಥಿತಿಯಲ್ಲಿ ಅವರ ಕುಟುಂಬಿಕರಾದ ಕರುಣಾ ಕಿಶನ್ ವಾಳ್ಕೆ ಹಾಗೂ ಶ್ವೇತಾ ವಾಳ್ಕೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಿಸಿದರು.
ಈ ಮೊದಲು ಶಿಕ್ಷಕ ಸುರೇಶ್ ಪೈ ನೇತೃತ್ವದಲ್ಲಿ ಶಾಲಾ ಸಂಸತ್ತನ್ನು ಸಂಘಟಿಸಲಾಯಿತು. ಸಂದೇಶ ಗೋವಿಂದ ಪಟಗಾರ ಹಾಗೂ ನವ್ಯಾ ದಾಮೋದರ ನಾಯ್ಕ ಶಾಲಾ ಮುಖ್ಯಮಂತ್ರಿಗಳಾಗಿ ಸರ್ವಾನುಮತದಿಂದ ಆಯ್ದುಕೊಂಡರು. ಇವರ ನಿರ್ದೇಶನದಲ್ಲಿ ಅರ್ಹ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಆಯ್ದು ವಿದ್ಯಾರ್ಥಿ ಮಂಡಲ ರಚಿಸಲಾಯಿತು. ಅಲ್ಲದೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೂರ್ವ ನಿಗದಿಗೊಂಡ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಅನೇಕ ವಿದ್ಯಾರ್ಥಿಗಳು ತಮ್ಮ ವಾಕ್ ಪ್ರತಿಭೆಯನ್ನು ಈ ಮೂಲಕ ತೋರ್ಪಡಿಸಿದರು. ಪರಿಸರ ಸಂರಕ್ಷಣೆಯ ಸಂಸ್ಮರಣೆಯಲ್ಲಿ ಹೂ ಕುಂಡಕ್ಕೆ ನೀರೆರೆಯುವುದರ ಮೂಲಕ ಶುಭಾರಂಭಗೊoಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕ ಪಾಂಡುರ0ಗ ಶೇಟ್ ವಾಗ್ರೇಕರ ವಹಿಸಿದ್ದರು.
ಸುಮಾರು 80 ಸಾವಿರ ರೂಪಾಯಿ ಮೌಲ್ಯದ ಪಾಠೋಪಕರಣಗಳನ್ನು ವಿತರಿಸಿ, ವಿವಿಧ ಸಂದರ್ಭಗಳಲ್ಲಿ ಶಾಲೆಗೆ ದೇಣಿಗೆ ನೀಡಿದ ವಾಳ್ಕೆಯವರ ಸಹಾಯವನ್ನು ಸ್ಮರಿಸಿ ಅವರು ಧನ್ಯತೆ ನೆನೆದರು. ಕಾರ್ಯಕ್ರಮದಲ್ಲಿ ಬ್ಯಾಗ್ ರಹಿತ ದಿನದ ವಿಶೇಷ ಅನುಭವವನ್ನು ವಿದ್ಯಾರ್ಥಿಗಳು ಪಡೆದು ಸಂತಸಗೊ0ಡರು. ಅತಿಥಿಗಳಾಗಿ ಆಗಮಿಸಿದ ಕರುಣಾ ವಾಳ್ಕೆ ಕೊಡಮಾಡಿದ ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊ0ಡಿತು.