Slide
Slide
Slide
previous arrow
next arrow

ಚಂದಾವರ ಹನುಮ ನಾಡಿನ ಮಣ್ಣು ಅಯೋಧ್ಯಾ ರಾಮ ಮಂದಿರಕ್ಕೆ ರವಾನೆ

300x250 AD

ಕುಮಟಾ: ಇಲ್ಲಿನ ಯುವ ಬ್ರಿಗೇಡ್‌ನ ಕಾರ್ಯಕರ್ತರಿಂದ ಚಂದಾವರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ದೇವಸ್ಥಾನದಲ್ಲಿನ ಪವಿತ್ರ ಮಣ್ಣನ್ನು ಸಂಗ್ರಹಿಸಿ ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಿಕೊಡಲಾಯಿತು.

ಶ್ರೀ ಹನುಮಂತ ದೇವಸ್ಥಾನಗಳಲ್ಲಿರುವ ಪವಿತ್ರ ಮಣ್ಣನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಿಕೊಡುವ ಸತ್‌ಕಾರ್ಯಕ್ಕೆ ಯುವ ಬ್ರಿಗೇಡ್ ಮುಂದಾಗಿದೆ. ಅದರಂತೆ ಇಲ್ಲಿನ ಯುವ ಬ್ರಿಗೇಡ್‌ನ ಕಾರ್ಯಕರ್ತರು ಚಂದಾವರ ಸೀಮೆಯ ಪ್ರಸಿದ್ಧ ಶ್ರೀ ಹನುಮಂತ ದೇವಸ್ಥಾನದ ಪವಿತ್ರ ಮಣ್ಣನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಿಕೊಡುವ ಕಾರ್ಯ ಮಾಡಿದೆ.
ಈ ಸತ್ ಕಾರ್ಯಕ್ಕೂ ಮೊದಲು ಕಾರ್ಯಕರ್ತರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತಮ್ಮ ಧಾರ್ಮಿಕ ಭಾವ ಮೆರೆದಿದ್ದಾರೆ. ಬಳಿಕ ದೇವಸ್ಥಾನದಲ್ಲಿನ ಪವಿತ್ರ ಪಣ್ಣನ್ನು ಸಂಗ್ರಹಿಸಿ, ಅಯೋಧ್ಯೆಗೆ ಕಳುಹಿಸಿಕೊಡುವ ಕಾರ್ಯ ಮಾಡಲಾಗಿದೆ. ಮುಂದಿನ ವಾರವೂ ಇನ್ನೊಂದು ಹನುಮನ ದೇವಸ್ಥಾನದಲ್ಲಿನ ಮಣ್ಣನ್ನು ಸಂಗ್ರಹಿಸುವ ಕಾರ್ಯ ನಡೆಯಲಿದೆ. ಹಾಗಾಗಿ ಹನುಮನ ದೇವಸಸ್ಥಾನವಿರುವ ಹಳ್ಳಿಗಳಲ್ಲಿ ಅಲ್ಲಿನ ಗ್ರಾಮಸ್ಥರು ನಮ್ಮನ್ನು ಸಂಪರ್ಕಿಸಿದಲ್ಲಿ ಮುಂದಿನ ವಾರ ಆ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುವುದು ಎಂದು ಯುವ ಬ್ರಿಗೇಡ್‌ನ ಪ್ರಮುಖರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ Tel:+919686314120 ಮತ್ತು Tel:+919481282357 ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top