Slide
Slide
Slide
previous arrow
next arrow

ಶಾಸಕರು ಸನ್ಮಾನ ಬಿಟ್ಟು ನೀರಿನ ಸಮಸ್ಯೆ ಬಗೆಹರಿಸಲಿ: ಹಿತೇಂದ್ರ ನಾಯ್ಕ

300x250 AD

ಸಿದ್ದಾಪುರ: ಶಿರಸಿ- ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಅಭಿನಂದನೆ, ಸನ್ಮಾನ ಕಾರ್ಯಕ್ರಮಕ್ಕೆ ಸಮಯ ನೀಡುವ ಬದಲು ಕ್ಷೇತ್ರದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಒತ್ತು ನೀಡಲಿ ಎಂದು ಆಮ್ ಆದ್ಮಿ ಪಕ್ಷದ ಹಿತೇಂದ್ರ ನಾಯ್ಕ ಒತ್ತಾಯಿಸಿದ್ದಾರೆ.

ಕ್ಷೇತ್ರದ ಸಿದ್ದಾಪುರದ ಪಟ್ಟಣದಲ್ಲಿ 15 ವಾರ್ಡ್ ಸೇರಿದಂತೆ ಹಳ್ಳಿಗಳಿಗೆ ಕುಡಿಯಲು ನೀರಿಲ್ಲ. ಸಮಾಜದ ಬಗ್ಗೆ ಕಳಕಳಿ ಇರುವ ಕೆಲವರು ಅವರ ಕೈಯಲ್ಲಿ ಆದಷ್ಟು ಮನೆ ಮನೆಗೆ ನೀರು ಕೊಡುವ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಕೇವಲ ಹಿಂದಿನ ಶಾಸಕರು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಹೇಳಿಕೊಂಡು ಬಂದು ಜನರ ವಿಶ್ವಾಸ ಗಳಿಸಿ ಶಾಸಕರಾದ ಭೀಮಣ್ಣ ಅವರು ಜನಗಳಿಗೆ ಮೂಲಭೂತ ಅವಶ್ಯಕತೆ ಆಗಿರುವ ನೀರನ್ನು ಒದಗಿಸುವುದರಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ಮನೆಗೆ 5 ಕೊಡಗಳಷ್ಟು ನೀರನ್ನು ತಲುಪಿಸಲಾಗುತ್ತದೆ ಎಂದು ಅಲ್ಲಿಯ ಜನರು ನನ್ನೊಂದಿಗೆ ಅಭಿಪ್ರಾಯ ಹಂಚಿಕೊ0ಡಿದ್ದಾರೆ. ನಮ್ಮ ಶಾಸಕರು ಈಗಲಾದರೂ ಹಾರ ಹಾಕಿಸಿಕೊಂಡು ಸನ್ಮಾನ ಮಾಡಿಕೊಳ್ಳುವುದಕ್ಕೆ ಹೋಗುವುದನ್ನ ಕಡಿಮೆ ಮಾಡಿ ಜನರ ನೋವಿಗೆ ಸ್ಪಂದಿಸಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಬೇಕು, ಮತಗಳನ್ನ ಪಡೆಯಲು ಕಾರ್ಯಕರ್ತರನ್ನ ಬಳಸಿಕೊಂಡoತೆ ನೀರಿನ ಸಮಸ್ಯೆ ಪರಿಹರಿಸಲು ಅವರನ್ನು ಬಳಸಿಕೊಳ್ಳಲಿ. ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ಅವರಿಂದ ಮಾಹಿತಿ ಪಡೆದು ಸೂಕ್ತ ಪರಿಹಾರದ ವ್ಯವಸ್ಥೆ ಮಾಡಲಿ. ನನಗೆ ತಿಳಿದಿರುವಂತೆ ಈ ಬಾರಿ ಇಷ್ಟು ನೀರಿನ ಸಮಸ್ಯೆ ಆದರೂ ಸ್ವತಃ ಶಾಸಕರು ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಿ. ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top