ಜೊಯಿಡಾ: ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವೈಜಗಾವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ತಹಶೀಲ್ದಾರ್ ಬಸವರಾಜ ತೆನಳ್ಳಿ, ಪಿಎಸ್‌ಐಗಳಾದ ಬಸವರಾಜ್ ಎಂ ಮತ್ತು ಕೃಷ್ಣಕಾಂತ್ ಪಾಟೀಲ್, ಉಪ ತಹಶೀಲ್ದಾರ್ ಸುರೇಶ್ ಒಕ್ಕುಂದ, ಹಾಗೂ ಕಂದಾಯ ಅಧಿಕಾರಿ ಶ್ಯಾಮಸುಂದರ್ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದೊಂದಿಗೆ ಈ ದಾಳಿಯನ್ನು ನಡೆಸಲಾಗಿತ್ತು.
ರಾಮನಗರ ಪ್ರದೇಶ ವ್ಯಾಪ್ತಿಯಲ್ಲಿ ಬರುವ ವೈಜಗಾವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಸುಮಾರು 23 ಟಿಪ್ಪರ್ ನಷ್ಟು ಇರಬಹುದಾಗಿದ್ದ ಸುಮಾರು 3,30,000 ರೂಪಾಯಿ ಅಂದಾಜು ಮೌಲ್ಯದ ಮರಳನ್ನು ವಶಪಡಿಸಿಕೊಂಡು ತಹಶೀಲ್ದಾರರಿಗೆ ಹಸ್ತಾಂತರ ಮಾಡಿಸಲಾಗಿದೆ. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.