ಶಿರಸಿ: ಇತ್ತೀಚೆಗೆ ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ 8,9, 10ನೇ ತರಗತಿಗಳ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಶಿಕ್ಷಣದ ಜೊತೆ ಸಂಸ್ಕಾರ ಎಂಬ ಧ್ಯೇಯದೊಂದಿಗೆ ವಿಶಿಷ್ಟವಾಗಿ ನಡೆಸಲಾಯಿತು ಪಾಲಕರ ಪಾದಪೂಜೆಯನ್ನು ಮಾಡಿ ಪಾಲಕರ ಮುಂದೆ ಪ್ರತಿಜ್ಞೆಯನ್ನು ಮಾಡಿ ಪಾಲಕರಿಂದ ಆಶೀರ್ವಾದವನ್ನು ಮಕ್ಕಳು ಪಡೆದರು. ಈ ಕ್ಷಣ ಅತ್ಯಂತ ಭಾವಪೂರ್ಣ ಸನ್ನಿವೇಶಕ್ಕೆ ಕಾರಣವಾಯಿತು.
ತದನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಶಿಕ್ಷಕ ಲೋಕನಾಥ್ ಹರಿಕಂತ್ರ ಪ್ರಸ್ತಾವಿಕವಾಗಿ ಮಾತನಾಡಿದರು ಸಂಸ್ಥೆಯ ಕಾರ್ಯದರ್ಶಿ ಶ್ರೀಧರ್ ನಾಯಕ್ ಸಂಸ್ಥೆಯ ಸಾಧನೆಯನ್ನು ಹಾಗೂ ಪಾಲಕರ ಜವಾಬ್ದಾರಿಯನ್ನು ತಿಳಿಸಿದರು. ಪಾಲಕರ ಜೊತೆಗಿನ ಸಂವಾದದ ನಂತರ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಮಾತನಾಡುತ್ತಾ ಮಕ್ಕಳಿಗೆ ತಮ್ಮ ಪಾಲಕರು ಎಷ್ಟು ಶ್ರಮವಹಿಸುತ್ತಿದ್ದಾರೆ ಎಂಬ ಅರಿವಿರಬೇಕು ಜೊತೆಗೆ ಸಂಸ್ಕಾರ ಮಗುವಿನಲ್ಲಿ ಜಾಗೃತವಾಗಬೇಕು. ಅದಾದಾಗ ಮಾತ್ರ ಬಾಲಕ ಪಾಲಕ ಶಿಕ್ಷಕರ ನಡುವೆ ಬಂಧ ಏರ್ಪಡುವುದು. ಕಾರಣ ಈ ರೀತಿಯ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು ಶಿಕ್ಷಕ ಗಣೇಶ ಸಾಯಿಮನೆ ಪರೀಕ್ಷಾ ಪದ್ಧತಿಯ ಬಗ್ಗೆ ತಿಳಿಸಿ ವಂದಿಸಿದರು. ಶಿಕ್ಷಕ ಪ್ರಸಾದ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು