ನವದೆಹಲಿ:ದೆಹಲಿಯ ತೀನ್ ಮೂರ್ತಿ ಭವನದಲ್ಲಿರುವ ನೆಹರೂ ಮೆಮೋರಿಯಲ್ ಮ್ಯೂಸಿಯಂ ಆಂಡ್ ಲೈಬ್ರೆರಿಯನ್ನು ಪ್ರಧಾನಮಂತ್ರಿ ಮೆಮೋರಿಯಲ್ ಮ್ಯೂಸಿಯಂ ಆಂಡ್ ಲೈಬ್ರೆರಿ ಸೊಸೈಟಿ ಎಂದು ಮರುನಾಮಕರಣ ಮಾಡುವ ತೀರ್ಮಾನ ಮಾಡಿದೆ.
ಮರುನಾಮಕರಣದ ಪ್ರಸ್ತಾಪ ಬರುತ್ತಿದ್ದಂತೆ, ಕಾಂಗ್ರೆಸ್ ಮೋದಿ ಸರಕಾರದ ವಿರುದ್ಧ ತಿರುಗಿನಿಂತಿದೆ. ಆದ್ರೆ ಇತ್ತ ಮಾಜಿ ಪ್ರಧಾನಿ ದೇವೇಗೌಡ ಮರುನಾಮಕರಣವನ್ನು ಬೆಂಬಲಿಸಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ರಾಜವಂಶದ ರಾಜಕೀಯದಲ್ಲಿ ಗಾಂಧಿ ಹೊರತುಪಡಿಸಿ ಇನ್ಯಾವುದೇ ವ್ಯಕ್ತಿಗಳ ಹೆಸರು ಉಲ್ಲೇಖಿಸಲು ಕಾಂಗ್ರೆಸ್ ಮುಂದಾಗುವುದಿಲ್ಲ. ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿ 10 ವರ್ಷ ಸೇವೆ ಸಲ್ಲಿಸಿದ್ದಾರೆ. ಮನ್‌ಮೋಹನ್ ಸಿಂಗ್ ಹೆಸರು ಎಲ್ಲಾದರೂ ಇದೆಯಾ? ಎಲ್ಲಾ ಸರ್ಕಾರಿ ಕಟ್ಟಡ, ಯೋಜನೆ, ಸಾರ್ವಜನಿಕ ಪ್ರದೇಶ ಸೇರಿದಂತೆ ಹಲೆವೆಡೆ ಗಾಂಧಿ ಕುಟುಂಬದ ಹೆಸರನ್ನೇ ಇಡಲಾಗಿದೆ. ಈ ನಡೆಯನ್ನು ಮೋದಿ ಸವಾಲಾಗಿ ಸ್ವೀಕರಿಸಿ. ನೆಹರೂ ಸ್ಮಾರಕ ಸಂಗ್ರಹಾಲಯ ಹೆಸರನ್ನು ಎಲ್ಲಾ ಪ್ರಧಾನ ಮಂತ್ರಿಗಳ ಸ್ಮಾರಕ ಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ. ಇದು ಉತ್ತಮ ನಡೆ ಎಂದು ಹೇಳಿದ್ದಾರೆ.
ಈ ದೇಶದ ಇತಿಹಾಸ ಕೇವಲ ಗಾಂಧಿ ಕುಟುಂಬದಿಂದ ಆರಂಭಗೊಂಡು, ಗಾಂಧಿ ಕುಟುಂಬಕ್ಕೆ ಅಂತ್ಯಗೊಳ್ಳುತ್ತಿಲ್ಲ. ಹಲವರ ತ್ಯಾಗ ಪರಿಶ್ರಮವಿದೆ. ಪ್ರಧಾನಿಯಾಗಿ ಹಲವರು ಸೇವೆ ಸಲ್ಲಿಸಿದ್ದಾರೆ. ಅವರಿಗೂ ಗೌರವ ಸಿಗಬೇಕಿದೆ. ಇದನ್ನು ಮೋದಿ ಮಾಡಿದ್ದಾರೆ. ನೆಹರೂ ಹಾಗೂ ಗಾಂಧಿ ಕುಟುಂಬದ ಬಗ್ಗೆ ಅತ್ಯಂತ ಗೌರವವಿದೆ. ಅವರ ಕೂಡುಗೆಯೂ ಈ ದೇಶಕ್ಕಿದೆ ಎಂದು ದೇವೇಗೌಡ ಹೇಳಿದ್ದಾರೆ.