Slide
Slide
Slide
previous arrow
next arrow

‘ಒಂದು ಗಿಡ ಸಾವಿರ ಜೀವಕ್ಕೆ ಉಸಿರು’ ಎಂಬಂತೆ ಅರಣ್ಯ ಬೆಳೆಸಿ ಉಳಿಸಿ: ಪ್ರಶಾಂತ್ ನಾಯಕ್

300x250 AD

ಶಿರಸಿ: ತಾಲೂಕಿನ ಹಲಸಿನಕಟ್ಟಾ ಗ್ರಾಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಪ್ರಜಾವಾಣಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉಚಿತ ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಜೂ.14, ಬುಧವಾರದಂದು ಆಯೋಜಿಸಲಾಗಿತ್ತು.

ರೈತರಿಗೆ ಉಪಯುಕ್ತವಾದ ಗೇರು, ಪೇರಲೆ, ನೆಲ್ಲಿ, ಸೀತಾಫಲ, ರಾಮಫಲ ಗಿಡಗಳನ್ನು ವಿತರಿಸಿ, ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ಪರಿಸರದ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಕೊಡ್‌ವೆಸ್ ಸಂಸ್ಥೆಯು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಹಾಗೂ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. “ಒಂದು ಗಿಡ ಸಾವಿರ ಜೀವಕ್ಕೆ ಉಸಿರು” ಎಂಬಂತೆ ಅರಣ್ಯ ಬೆಳೆಸಿ ಉಳಿಸಿ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಎಫ್‌ಪಿಒ ವಿಭಾಗದ ಕಾರ್ಯಕ್ರಮ ಅಧಿಕಾರಿಗಳಾದ ಪ್ರಶಾಂತ್ ನಾಯಕ್ ತಿಳಿಸಿದರು.

300x250 AD

ಕಾರ್ಯಕ್ರಮದಲ್ಲಿ ಹಲಸಿನಕಟ್ಟಾ ಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್, ಆಶಾ ಕಾರ್ಯಕರ್ತೆ, ಸ್ಕೊಡ್‌ವೆಸ್ ಸಂಸ್ಥೆಯ ಉಮೇಶ್ ಮರಾಠಿ,ಕುಮಾರ ಪಟಗಾರ್, ಪ್ರಶಾಂತ್ ನಾಯ್ಕ್, ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಶಾಲಾ ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top