ಕಾರವಾರ: ನಗರಸಭೆ ವ್ಯಾಪ್ತಿಯ ಆಸ್ತಿಗಳ ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲಿಸಿ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆಗೆ ಆಸ್ತಿ ಮಾಲೀಕರು, ಅನುಭೋಗದಾರರು ವಿವಿಧ ದಾಖಲೆಗಳನ್ನು ನಗರಸಭೆಗೆ ಕೂಡಲೇ ಸಲ್ಲಿಸಿ, ಆಸ್ತಿ ವಿವರ ಡಿಜಿಟಲೀಕರಣಕ್ಕೆ ಸಹಕರಿಸುವಂತೆ ಸೂಚಿಸಲಾಗಿದೆ.
ತಮ್ಮ ಭಾವಚಿತ್ರ, ಕಟ್ಟಡ ಅಥವಾ ನಿವೇಶನದ ಫೋಟೊ (ಲ್ಯಾಟಿಟ್ಯೂಡ್ ಹಾಗೂ ಲಾಂಗಿಟ್ಯೂಡ್ ವಿವರದೊಂದಿಗೆ), ಜಾಗೆಯ ಮಾಲೀಕತ್ವದ ದಾಖಲೆಗಳು (ಆರ್.ಟಿ.ಸಿ/ ಸಿಟಿಎಸ್ ಮತ್ತು ಖರೀದಿ ಪತ್ರ ಇತರೆ), ಬಿನ್‌ಶೇತಕಿ ಆದೇಶ ಪ್ರತಿ ಮತ್ತು ಅನುಮೋದಿತ ಲೇ- ಔಟ್ ಪ್ರತಿ, ಕಟ್ಟಡ ಪರವಾನಿಗೆ ಪ್ರತಿ, ಮಾಲೀಕರ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಮಾಲೀಕರ ಗುರುತಿನ, ದಾಖಲೆ ಪಾನ್‌ಕಾರ್ಡ, ಡ್ರೈವಿಂಗ್ ಲೈಸನ್ಸ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಪಡಿತರ ಚೀಟಿ, ಆಸ್ತಿಯ ಚಕ್ಕುಬಂದಿ (ಆಸ್ತಿ ವಿವರ, ಕಟ್ಟಡ ನಂಬರಿನೊಂದಿಗೆ) ಹಾಗೂ ನಿವೇಶನದ ಉದ್ದ ಮತ್ತು ಆಗಲ, ತೆರಿಗೆ ಪಾವತಿ ಚಲನ್‌ಗಳನ್ನು (ಮರುಪರಿಶೀಲನಿಗಾಗಿ), ನೀರಿನ ಸಂಪರ್ಕ ಸಂಖ್ಯೆ, ಯುಜಿಡಿ ಸಂಪರ್ಕ ಸಂಖ್ಯೆ, ವಿದ್ಯುತ್ ಮೀಟರ್ ಸಂಖ್ಯೆ (ಮಹಡಿವರು ಪ್ರತೇಕ ನೀಡುವುದು), ಮಾಜಿ ಸೈನಿಕರಾಗಿದ್ದಲ್ಲಿ ವಿವರ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಕರ ವಸೂಲಿ ಸಹಾಯಕರು ಕೋಣೆಮನೆ ಪರಿಸರ – ಶಂಕರ ಅಡಾರಕರ- Tel:+919986710040, ಬಾಡ ಪರಿಸರ- ತೇಲು ಹರಿಕಂತ್ರ – Tel:+919449340095, ಕೋಡಿಬಾಗ, ಸುಂಕೇರಿ, ಕಠಿಣಕೋಣ, ಬಿಣಗಾ ಪರಿಸರ – ಶ್ರೀನಿವಾಸ ಮಿಸ್ಕಿನ್- Tel:+919663060420, ನಂದನಗದ್ದಾ, ಬಾಂಡಿಶಿಟ್ಟಾ, ಕೆ. ಎಚ್. ಬಿ, ಪಾದ್ರಿಬಾಗ, ಟೀಚರ್ಸ್ ಕಾಲನಿ – ಉದಯ ನಾಯ್ಕ – Tel:+919964490760 ಗೆ ಸಂಪರ್ಕಿಸಿ ಎಂದು ನಗರಸಭೆ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.