• Slide
    Slide
    Slide
    previous arrow
    next arrow
  • ಸ್ಕೊಡವೆಸ್’ನಿಂದ ವಿಕಲಚೇತನರಿಗೆ ಕೃತಕ ಕಾಲುಗಳ ಪೂರೈಕೆಗಾಗಿ ತಪಾಸಣಾ ಶಿಬಿರ

    300x250 AD

    ಶಿರಸಿ: ಇಲ್ಲಿನ ಸ್ಕೊಡ್‌ವೆಸ್ ಸಂಸ್ಥೆಯು ಒಮೆಗಾ ಹಾಗೂ ಡಿಎನ್‌ಎ ಸಂಸ್ಥೆ ಬೆಂಗಳೂರುರವರ ಸಹಯೋಗದಲ್ಲಿ ಜಿಲ್ಲೆಯ ವಿಕಲಚೇತನರಿಗೆ ಉಚಿತ ಕೃತಕ ಕಾಲು ಪೂರೈಕೆಗಾಗಿ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

    ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ವಿಕಲಚೇತನರು ಜೂ.17 ರಂದು ಕುಮಟಾ ತಾಲೂಕು ಪಂಚಾಯತ ಸಭಾಂಗಣದಲ್ಲಿ ಹಾಗೂ ಸಿದ್ದಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ವಿಕಲಚೇತನರು ಜೂ.18 ರಂದು ಮಿನಿ ವಿಧಾನ ಸೌಧ ಹತ್ತಿರ, ಪಂಚಾಯರ್ ರಾಜ್ ಇಲಾಖೆ, ಆವರಣದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಹಾಜರಾಗಿ ತಪಾಸಣಾ ಶಿಬಿರದಲ್ಲಿ ಪರೀಕ್ಷೆಗೆ ಒಳಗಾಗಬಹುದಾಗಿದೆ.

    300x250 AD

    ತಪಾಸಣೆಗೆ ಒಳಗಾದ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: Tel:+919980247048 ಗೆ ಸಂಪರ್ಕಿಸುವಂತೆ ಕೋರಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top