Slide
Slide
Slide
previous arrow
next arrow

ಎಂಎಂ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಯಶಸ್ವಿ

300x250 AD

ಶಿರಸಿ: ಅನೇಕ ವರ್ಷಗಳಿಂದ ನಾವು ನಿರಂತರವಾಗಿ  ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬಂದಿದ್ದೇವೆ. ಹಲವು ವರ್ಷಗಳ ಹಿಂದೆ ರಕ್ತದಾನ ಮಾಡುವುದಕ್ಕೆ ಆತಂಕ ಮತ್ತು ಹಿಂಜರಿಕೆಯನ್ನು ಮಾಡುತ್ತಿದ್ದರು. ಆರೋಗ್ಯವಂತರಾದ ಯಾವ ವ್ಯಕ್ತಿಯಾದರು ರಕ್ತದಾನವನ್ನು ಮಾಡಬಹುದು. ಪ್ರತಿಯೊಬ್ಬರು ಅವರ ರಕ್ತದ ಗುಂಪನ್ನು ತಿಳಿದಿರುವುದು ಅವಶ್ಯಕವಾಗಿದೆ. ಎಂದು  ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್ ಹೇಳಿದರು.

ಅವರು ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್, ರೆಡ್ ಕ್ರಾಸ್, ಎನ್.ಸಿ.ಸಿ, ಸ್ಕೌಟ್ & ಗೈಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ದಿನದ ಅಂಗವಾಗಿ  ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಆರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಿದವರು ಆರೋಗ್ಯವಂತರಾಗಿರುತ್ತಾರೆ. ಆರೋಗ್ಯವನ್ನು ಉತ್ತಮವಾಗಿಸಲು, ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ರಕ್ತದಾನ ಮಾಡುವ ಸಂಕಲ್ಪವನ್ನು ನಾವೆಲ್ಲರು ಮಾಡಿಕೊಂಡರೆ ಎಷ್ಟೋ ಜನರ ಜೀವವನ್ನು ಉಳಿಸಬಹುದು. ಬೇರೆಯವರ ಮೆಚ್ಚುಗೆಗಾಗಿ ನಾವು ರಕ್ತದಾನವನ್ನು ಮಾಡುವ ಬದಲಾಗಿ ನಮ್ಮ ಆತ್ಮತೃಪ್ತಿಗಾಗಿ ರಕ್ತದಾನದಂತ ಪುಣ್ಯದ ಕಾರ್ಯವನ್ನು ಮಾಡೋಣ ಎಂದು ಹೇಳಿದರು.

300x250 AD

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ಡ ಟಿಎಸ್ಎಸ್ ಆಸ್ಪತ್ರೆ ರಕ್ತ ಸಿಧಿ ಕೇಂದ್ರದ ಮುಖ್ಯಸ್ಥ ಡಾ.ಪಿ.ಎಸ್. ಹೆಗಡೆ ಮಾತನಾಡಿ, ಹದಿನೆಂಟು ವರ್ಷ ಮೇಲ್ಪಟ್ಟ ಅರವತ್ತು ವರ್ಷದ ಕೆಳಗಿನ ಆರೋಗ್ಯವಂತ ವ್ಯಕ್ತಿಯು ರಕ್ತದಾನವನ್ನು ಮಾಡಬಹುದು. ಇಂದಿನ ಯುವಜನರು ಅಪಘಾತಕ್ಕೆ ಈಡಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಯುವಜನರು ಅವರ ಜೀವನದ ಮಹತ್ವವನ್ನು ತಿಳಿಕೊಂಡಿರುವುದಿಲ್ಲ. ಕೊರೊನಾ ಸಂದರ್ಭದಲ್ಲಿ ರಕ್ತದಾನವು ತುಂಬಾ ವಿರಳವಾಗಿತ್ತು.ರಕ್ತದಾನ ಶಿಬಿರ ನಡೆಸುವುದರ ಉದ್ದೇಶ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವುದು ಆಗಿದೆ. ಸಮಾಜದಿಂದ ನಮಗೇನು ದೊರಕಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ನೀಡಿದ್ದೇವೆ ಎನ್ನುವುದು ತುಂಬಾ ಮುಖ್ಯವಾಗಿದೆ. ನಾವು ಸಮಾಜಕ್ಕೆ ಏನನ್ನು ನೀಡಲಿಲ್ಲವೆಂದರೆ ನಮ್ಮ ಜೀವನವೇ ವ್ಯರ್ಥವಾಗುತ್ತದೆ. ಪ್ರತಿಯೊಬ್ಬರು ನೀಡುವ ರಕ್ತದಿಂದ ಹಲವಾರು ಜನರ ಜೀವವನ್ನು ಬದುಕಿಸಬಹುದಾಗಿದೆ. ರಕ್ತದಾನ ಇದು ವ್ಯವಹಾರವಲ್ಲ ಇದು ಮುಗ್ದ ಜೀವವನ್ನು ಉಳಿಸುವ ಅಮೂಲ್ಯವಾದ ಕಾರ್ಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮ ದಲ್ಲಿ ದೇಶಪಾಂಡೆ ಪೌಂಡೇಶನ್ ಸುನಿಲ್ ಕುಲಕರ್ಣಿ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಸ್ವಾಗತಿಸಿ,ಪ್ರಾಸ್ತಾವಿಸಿದರು.ಡಾ.ಆರ್.ಆರ್. ಹೆಗಡೆ ವಂದಿಸಿದರು. ರಾಘವೇಂದ್ರ ಹೆಗಡೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top