Slide
Slide
Slide
previous arrow
next arrow

ಒಕ್ಕೂಟದಿಂದ ನೀಡಿದ ಅನುದಾನ ಹಣ ಬಳಸಿಕೊಂಡು ಹಾಲು ಸಂಘಗಳು ಸ್ವಾವಲಂಬಿಗಳಾಗಲಿ: ಸುರೇಶ್ಚಂದ್ರ ಹೆಗಡೆ

300x250 AD

ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ತಾಲೂಕಿನ ಬೆಣಗಾಂವ್ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಬೆಣಗಾಂವ್ ಹಾಗೂ ಬುಗುಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಬುಗುಡಿಕೊಪ್ಪ ಸಂಘಗಳಿಗೆ ನೂತನವಾಗಿ ಪ್ರಾರಂಭಗೊಂಡ ಸಂಘಗಳ ಮೂಲಭೂತ ಸೌಕರ್ಯದ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಚೆಕ್‌ ಗಳನ್ನು ಹಾಗೂ ವಾನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ವಾನಳ್ಳಿಯ ಹಾಲು ಉತ್ಪಾದಕರ ಆಕಳುಗಳು ಮರಣ ಹೊಂದಿದ ಕಾರಣ ಚೆಕ್‌’ನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಒಕ್ಕೂಟದ ವತಿಯಿಂದ ನೂತನವಾಗಿ 2022-2023 ನೇ ಸಾಲಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಭೂತ ಸೌಕರ್ಯಕ್ಕಾಗಿ ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಚೆಕ್‌ ಮೂಲಕ ಹಾಲು ಸಂಘಗಳಿಗೆ ವಿತರಿಸಲಾಗಿದ್ದು, ಸಂಘಗಳು ನೀಡಿದ ಅನುದಾನದಿಂದ ಸ್ವಾವಲಂಬಿಗಳಾಗಿ, ಹಾಲು ಉತ್ಪಾದಕರು ತಮ್ಮಿಂದ ಸಾಧ್ಯವಾದಷ್ಟು ಅನುಕೂಲವಾಗುವಂತೆ ಕಾರ್ಯನಿರ್ವಹಿಸಿ ತಾವೂ ಸಹ ಉತ್ತಮ ಪ್ರಗತಿಯನ್ನು ಹೊಂದುವಂತಾಗಬೇಕು ಎಂದರು.

ಬೆಣಗಾಂವ್‌ ಹಾಗೂ ಬುಗುಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ರೂ. 40,000/- ಮೊತ್ತದ ಚೆಕ್‌ಗಳನ್ನು ಹಾಗೂ ವಾನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಶ್ರೀಧರ ಜಿ ಭಟ್‌ ಇವರ ಆಕಳುಗಳು ಮರಣ ಹೊಂದಿದ ಕಾರಣ ರೂ.37,000/-, ಮೊತ್ತದ ಚೆಕ್‌ನ್ನು ಸುರೇಶ್ಚಂದ್ರ ಕೆಶಿನ್ಮನೆ ಸಂಘಗಳಿಗೆ ಖುದ್ದು ಭೇಟಿ ನೀಡಿ ವಿತರಿಸಿದರು.

300x250 AD

ಹಾಲು ಸಂಘಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಘಗಳಿಗೆ ಅವಶ್ಯಕವಿರುವ ಉಪಕರಣಗಳನ್ನು ಖರೀದಿಸಿ ಸಂಘದ ದಿನನಿತ್ಯದ ವ್ಯವಹಾರಗಳನ್ನು ಸರಾಗವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ, ಉತ್ತಮ ಗುಣಮಟ್ಟದ ಹಾಲನ್ನು ರೈತರಿಂದ ಖರೀದಿಸಲು ಉಪಯೋಗವಾಗುವಂತೆ ದೊಡ್ಡ ಪ್ರಮಾಣದ ಅನುದಾನವನ್ನು ಸಂಘಗಳಿಗೆ ಒದಗಿಸಿ ಸಂಘಗಳಲ್ಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸಲು ಹಾಗೂ ಸಂಘಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಘಗಳ ರೂ.50,000/- ಗಳ ಅನುದಾನ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ವಿಸ್ತರಣಾ ಸಮಾಲೋಚಕರಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಬೆಣಗಾಂವ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ ವಡ್ಡರ್, ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಸುನೀಲ್ ಭಟ್‌, ಮುಖ್ಯಕಾರ್ಯನಿರ್ವಾಹಕರಾದ ದೇವೆಂದ್ರ ಮರಾಠಿ, ಬುಗುಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಧರ ಗೌಡ ಮುಖ್ಯಕಾರ್ಯನಿರ್ವಾಹಕರಾದ ನಾಗೇಶ ನಾಯ್ಕ, ವಾನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ, ಉಪಾಧ್ಯಕ್ಷರಾದ ರವೀಂದ್ರ ಭಟ್‌, ಮುಖ್ಯಕಾರ್ಯನಿರ್ವಾಹಕರಾದ ರಮೇಶ ಹೆಗಡೆ, ಸಂಘದ ಆಡಳಿತ ಮಂಡಳಿಯ ಸದಸ್ಯರು, ಜಾನುವಾರು ವಿಮಾ ಯೋಜನೆಯ ಫಲಾನುಭವಿ ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top