ಕಾರವಾರ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ದಾಂಡೇಲಿಯಲ್ಲಿ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಟೋಮೇಷನ್ ಅಂಡ್ ಸಿಸ್ಟಮ್ ಡಿಸೈನ್, ಎಲೆಕ್ಟ್ರಿಕಲ್, ಇನ್ಸ್ಟಾಲೇಶನ್ ಅಂಡ್ ಡ್ರೈವ್ಸ್ ಅಂಡ್ ಇಲೆಕ್ಟ್ರಿಕಲ್ ಪ್ಯಾನಲ್ ಸಾಫ್ಟವೇರ್, ಮೆಕ್ಯಾನಿಕಲ್ ಕಂಪೊನೆAಟ್ಸ್ ಅಂಡ್ ಸಬ್ ಸಿಸ್ಟಮ್, ಹೈಡ್ರಾಲಿಕ್ಸ್ ಅಂಡ್ ನ್ಯುಮಾಟಿಕ್ಸ್, ಪಿಎಲ್‌ಸಿ ಸೆನ್ರ‍್ಸ್ ಅಂಡ್ ಎಚ್ ಎಮ್ 1, ಸ್ಕಾಡಾ, ಇಂಡಸ್ಟ್ರಿಯಲ್ 4.0 ಅಂಡ್ ರೊಬೊಟಿಕ್ಸ್ ಸಿಸ್ಟಮ್ಸ್ ವಿಷಯಗಳನ್ನೊಳಗೊಂಡಿರುತ್ತದೆ.
ಡಿಪ್ಲೊಮಾ/ಬಿ.ಇ-ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಇ ಅಂಡ್ ಸಿ, ಇಇಇ, ಇನ್ ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್‌ನಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳು ಆರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.
ಆಸಕ್ತಿ ಅಭ್ಯರ್ಥಿಗಳು ಪೋನ್ ನಂ. Tel:+9108284230437, Tel:+919429530914 , Tel:+919449356647 ನ ಮೂಲಕ ಅರ್ಜಿಯನ್ನು ಪಡೆದು ಸಲ್ಲಿಸಬಹುದು ಎಂದು ಪ್ರಾಂಶುಪಾಲರು ರಾಮಚಂದ್ರ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.