ಶಿರಸಿ: ಲಯನ್ಸ್ ಶಿಕ್ಷಣ ಸಂಸ್ಥೆಯ ಒಂದು ಕ್ರಾಂತಿಕಾರಕ ಹೆಜ್ಜೆಯಾಗಿ ಉ.ಕ. ಜಿಲ್ಲೆಯಲ್ಲೇ ವಿಶೇಷ ಶೈಕ್ಷಣಿಕ ಸೌಲಭ್ಯಗಳುಳ್ಳ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು.ಕಾಲೇಜ್ ಹಾಗೂ ನರ್ಸರಿ ವಿಭಾಗವು ಜೂ.12, ಸೋಮವಾರದಂದು ಸರಸ್ವತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು.
30 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ BASE ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಲಯನ್ಸ್ ಇದೊಂದು ಹೊಸ ಹೆಜ್ಜೆ ಇಡುತ್ತಿದೆ.
ಈ ಶುಭ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲ. ಪ್ರೊ. ಎನ್.ವಿ.ಜಿ ಭಟ್. ಗೌರವ ಕಾರ್ಯದರ್ಶಿ ಲ. ಪ್ರೊ. ರವಿ ನಾಯಕ್, ಉಪಾಧ್ಯಕ್ಷರಾದ MJF..ಲ. ಪ್ರಭಾಕರ್ ಹೆಗಡೆ ಕೋಶಾಧ್ಯಕ್ಷರಾದ ಉದಯ ಸ್ವಾದಿ, ಜಂಟಿ ಕಾರ್ಯದರ್ಶಿ ವಿನಯ್ ಹೆಗಡೆ ಬಸವನಕಟ್ಟೆ, ಸದಸ್ಯರಾದ ಲ. ಲೋಕೇಶ್ ಹೆಗಡೆ, ಶ್ರೀಕಾಂತ್ ಹೆಗಡೆ, ಶ್ಯಾಮಸುಂದರ್ ಭಟ್ , ಪ್ರಸ್ತುತ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ತ್ರಿವಿಕ್ರಮ್ ಪಟವರ್ಧನ್, ಕಾರ್ಯದರ್ಶಿ ಗಳಾದ MJF. ಲ. ರಮಾ ಪಟವರ್ಧನ್, ಲಯನ್ಸ್ ಕ್ಲಬ್ ನ ಹಲವು ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಿದರು.
ಪ್ರಾಂಶುಪಾಲ ಶಶಾಂಕ್ ಹೆಗಡೆ ಪ್ರಾಸ್ತಾವಿಕ ನುಡಿಯಲ್ಲಿ, ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಾತ್ಮಕ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕೆನ್ನುವ ಸದುದ್ದೇಶದಿಂದ BASE ನೊಂದಿಗೆ ಈ ಹೊಸ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸುಶ್ರಾವ್ಯವಾದ ಪ್ರಾರ್ಥನೆ ಗೀತೆಯನ್ನು ಹಾಡಿದರು .ಪ್ರಾಧ್ಯಾಪಕ ವೃಂದ, ಪಾಲಕರು, ವಿದ್ಯಾರ್ಥಿಗಳನ್ನೊಳಗೊಂಡು ಲಯನ್ಸ್, ಶಿಕ್ಷಣದಲ್ಲಿ ಮತ್ತೊಂದು ಉತ್ತಮ ಭವಿಷ್ಯಕ್ಕಾಗಿ ಉತ್ಸುಕತೆಯಿಂದ ಮತ್ತೊಂದು ಮಹತ್ತರ ಹೆಜ್ಜೆ ಇರಿಸಿದೆ.