ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 36ನೇ ಘಟಿಕೋತ್ಸವದಲ್ಲಿ ತಾಲೂಕಿನ ಕಾನಗೋಡಿನ ಪ್ರಗತಿಪರ
ರೈತ ದಂಪತಿಗಳ ಮಗಳು ಪಿ.ಎಚ್.ಡಿ ಜೊತೆ ಬಂಗಾರ ಪದಕ ಪಡೆದುಕೊಂಡಿದ್ದಾರೆ.
ರಮೇಶ ಹೆಗಡೆ ಹಾಗೂ ರಾಧಾ ಹೆಗಡೆ ದಂಪತಿಯ ಪುತ್ರಿ ಪ್ರಿಯಾ ಹೆಗಡೆ, ಜೋಯಿಡಾದ ಕುಣಬಿ ಜನಾಂಗಮತ್ತು ಅಂಕೋಲಾದ ಹಾಲಕ್ಕಿ ಜನಾಂಗದ ಆರೋಗ್ಯ ಹಾಗೂ ಪೋಷಕಾಂಶಗಳ (Health and Nutrition) ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು.
ಅವರ ಮಹಾ ಪ್ರಬಂಧಕ್ಕೆ ಮಾರ್ಗದರ್ಶಕರಾಗಿ ಡಾ. ವಿನುತಾ ಉಮೇಶ ಮುಕ್ತಾಮಠ ಸಹಕಾರ ಮಾಡಿದ್ದರು. ಬಿಎಸ್ಸಿ, ಎಂಎಸ್ಸಿ ಪದವಿ ಪಡೆದ ಪ್ರಿಯಾ ಪಿ.ಎಚ್.ಡಿ ಪದವಿಯನ್ನು ರಾಜ್ಯಪಾಲರಿಂದ ಸ್ವೀಕರಿಸಿದರು.
ಇವರ ಸಹೋದರಿ ಪ್ರೀತಿ ಹೆಗಡೆ 2017-18ರಲ್ಲಿ ಎಂ.ಎಸ್ಸಿ ಯಲ್ಲಿ ಬಂಗಾರದ ಪದಕ ಕೂಡ ಪಡೆದಿದ್ದು ಉಲ್ಲೇಖನೀಯ.