• Slide
    Slide
    Slide
    previous arrow
    next arrow
  • ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ಜಿಲ್ಲೆಯ ಆರಾಧ್ಯಾ

    300x250 AD

    ಗೋಕರ್ಣ: ಇಲ್ಲಿಯ ಸಮೀಪದ ತೊರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಬಾವಿ ಗ್ರಾಮದ ಆರಾಧ್ಯಾ ತಿಮ್ಮಣ್ಣ ನಾಯಕ (6) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾಳೆ.

    ಇವಳು ದೇವರಬಾವಿಯ ಮಧುರಾ ಮತ್ತು ತಿಮ್ಮಣ್ಣ ನಾಯಕ ದಂಪತಿಯ ಪುತ್ರಿಯಾಗಿದ್ದಾಳೆ. ಸದ್ಯ ಹಿತ್ತಲಮಕ್ಕಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದಿತ್ತಿದ್ದಾಳೆ. ಬಾಲ್ಯದಿಂದಲೇ ಪ್ರತಿಭಾವಂತಳಾದ ಇವಳು 3 ಸಾವಿರ ಪ್ರತಿಭಾವಂತರ ಮಧ್ಯೆ ಆಯ್ಕೆಯಾಗಿದ್ದಾಳೆ. ಪ್ಲಾಸ್ಟಿಕ್ ಬಳಕೆಯ ಬಗ್ಗೆ ಈಕೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿರುವುದು ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದೆ.
    ಕನ್ನಡದ ಹಿರಿಯ ಮತ್ತು ಪ್ರಖ್ಯಾತ ಸಾಹಿತಿಗಳ ಬಗ್ಗೆ, ಅವರ ಕೃತಿಗಳ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ನಿರರ್ಗಳವಾಗಿ ಸಂಘಟಕರು ಕೇಳಿದ ಪ್ರಶ್ನೆಗೆ ಸಂಪೂರ್ಣ ವಿವರಣೆ ನೀಡಿದ್ದಾಳೆ. ಅವರು ನೀಡಿದ ವಿಷಯದ ಬಗ್ಗೆ ಸಮರ್ಪಕ ಭಾಷಣ ಮಾಡಿದ್ದು, ಈ ಬಾಲಕಿಯ ಅಪೂರ್ವ ಪ್ರತಿಭೆಗೆ ಸಾಕ್ಷಿಯಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top