Slide
Slide
Slide
previous arrow
next arrow

ಹಿರೇಗುತ್ತಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

300x250 AD

ಗೋಕರ್ಣ: ಸಮೀಪದ ಹಿರೇಗುತ್ತಿಯ ಪ್ರೌಢಶಾಲೆಯಲ್ಲಿ ಸಂಜೀವಿನಿ ಆರೋಗ್ಯ ಕೂಟ, ಪ್ರಕೃತಿ ಇಕೋ-ಕ್ಲಬ್, ಡಾ. ಅಬ್ದುಲ್ ಕಲಾಂ ವಿಜ್ಞಾನ ಸಂಘ ಸಂಯುಕ್ರ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
ಆಡಳಿತ ಮಂಡಳಿಯ ಸದಸ್ಯ ಬೀರಣ್ಣ ನಾಯಕ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಹಸಿರೇ ಉಸಿರು ಎಂಬುದು ಕೇವಲ ಧ್ಯೇಯ ವಾಕ್ಯವಲ್ಲ. ಅದು ಒಂದು ಜೀವನದ ಮಾರ್ಗ. ಮರ-ಗಿಡಗಳಿಂದಲೇ ಸಮಸ್ತ ಬದುಕು ಎಂದು ಮುಖ್ಯಾಧ್ಯಾಪಕ ರೋಹಿದಾಸ ಎಸ್. ಗಾಂವಕರ ತಿಳಿಸಿದರು.

ಮಾರ್ಗದರ್ಶಿ ಶಿಕ್ಷಕ ಮಹಾದೇವ ಬೊಮ್ಮ ಗೌಡ ಮಾತನಾಡಿ, ಪರಿಸರವನ್ನು ಸಂರಕ್ಷಿಸಬೇಕು, ಜೀವ ಸಂಕುಲವನ್ನು ರಕ್ಷಿಸಬೇಕು ಹಾಗೂ ಮರಗಿಡಗಳನ್ನು ಉಳಿಸಿ ಬೆಳೆಸುವುದು. ನಮ್ಮೆಲ್ಲರ ಹೊಣೆ ಎಂದರು. ದೈಹಿಕ ಶಿಕ್ಷಕ ನಾಗರಾಜ. ಜಿ. ನಾಯಕ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ಎನ್. ರಾಮು, ಬಾಲಚಂದ್ರ ನಾಯಕ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top