• Slide
    Slide
    Slide
    previous arrow
    next arrow
  • ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

    300x250 AD

    ದಾಂಡೇಲಿ: ನಗರದ ಸೇಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

    ಕಾರ‍್ಯಕ್ರಮವನ್ನು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ.ಡಿ.ಬಸಾಪುರ ಅವರು ಇಂದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಶಿಕ್ಷಣವೆ ಎಲ್ಲದಕ್ಕೂ ಪ್ರಧಾನ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮಿಗಳಾಗುವುದರ ಜೊತೆಯಲ್ಲಿ ಸತತ ಅಧ್ಯಯನಶೀಲರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಇಷ್ಟದಿಂದ ಕಲಿತರೆ ಮುಂದಿನ ದಿನಗಳಲ್ಲಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಕೋರಿದರು.

    ಮುಖ್ಯ ಅತಿಥಿಗಳಾಗಿ ಫಾದರ್ ಸಂತೋಷ್ ನರ‍್ಹೋಣಾ ಅವರು ಭಾಗವಹಿಸಿ ಶಿಕ್ಷಣವಂತ ಮಗು ರಾಷ್ಟ್ರದ ಆಸ್ತಿ. ವಿದ್ಯಾರ್ಥಿಗಳು ಭವಿಷ್ಯದ ಉನ್ನತ ಗುರಿಯೊಂದಿಗೆ ಮುನ್ನಡೆಯಬೇಕೆಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸೆಲ್ವಿ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶೈಕ್ಷಣಿಕ ಉನ್ನತಿಯ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ನಮ್ಮಲ್ಲಿ ಅಹಂ ಇರಬಾರದು. ಯಾರಾದರೂ ನಮ್ಮಲ್ಲಿ ಬಂದು ಮಾತನಾಡಿದ ಸಂದರ್ಭದಲ್ಲಿ, ಏನಾದರೂ ಕೇಳಿದ ಸಂದರ್ಭದಲ್ಲಿ ಅಹಂನಿಂದ ವರ್ತಿಸದೆ ಸಮಾನಚಿತ್ತರಾಗಿ ವರ್ತಿಸುವ ಗುಣವನ್ನು ರೂಢಿಸಿಕೊಳ್ಳಬೇಕು. ಜನರ ಜೊತೆ ಉತ್ತಮ ಬಾಂದವ್ಯ, ಉತ್ತಮ ಸಂವಹನವನ್ನು ಹೊಂದಿರಬೇಕು. ಯಾವುದೇ ಹುದ್ದೆ, ಅಂತಸ್ತು ಶಾಶ್ವತವಲ್ಲ. ಆದರೆ ನಮ್ಮ ವ್ಯಕ್ತಿತ್ವ, ನಡವಳಿಕೆ ಸದಾ ಸ್ಮರಣೀಯ. ನಾವು ಯಾವುದೇ ಪದವಿಗೂ ಏರಿದರೂ ನಮ್ಮ ನಡವಳಿಕೆಯಲ್ಲಿ ಅಹಂ ಇರದೆ ಪ್ರತಿಯೊಬ್ಬ ವ್ಯಕ್ತಿಯು ನಮ್ಮಂತೆ ಮನುಷ್ಯನು ಎನ್ನುವುದನ್ನು ಅರಿತು ಎಲ್ಲರನ್ನು ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

    300x250 AD

    ಕಾರ‍್ಯಕ್ರಮದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಾದ ಅವೇಸ್ ಮುಜಾವರ್,  ಸಿಮ್ರಾನ್ ಅಬ್ದುಲ್ ರಜಾಕ್ ಜಾತಿಗೇರ್, ವೈಭವ್ ಪ್ರೇಮಾನಂದ ಗಾಂವಕರ್, ಕೋಮಲ್, ದ್ವೀತಿ ದೀಪಕ್ ನಾಯಕ, ಜುಬೇರಿಯಾ ಅಲ್ಲಭಕ್ಷ ತಾಳಿಕೋಟಿ, ಸಾಕ್ಷಿಉ ಸುಭಾಷ್ ನಾಯ್ಕ, ಪ್ರಜ್ವಲ್ ಶ್ರೀಕೃಷ್ಣ ನಾಯ್ಕ ಮೊದಲಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    ಶಿಕ್ಷಕಿ ಶಿರಿನ್ ಅವರು ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಗುರು ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಯಾಜ್ ಬಾಬು ಸೈಯದ್ ಮತ್ತು ರೇಷ್ಮಾ ಬಾವಾಜಿ ಅತಿಥಿಗಳನ್ನು ಪರಿಚಯಿಸಿದರು. ಡೈನಾ ಬೋರ್ಜಿಸ್ ವಂದಿಸಿದರು. ಕಾರ‍್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿಗಳು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top