• Slide
    Slide
    Slide
    previous arrow
    next arrow
  • ಮಗನ ಆರೋಗ್ಯಕ್ಕಾಗಿ ತಾಯಿಯಿಂದ ಧನ ಸಹಾಯಕ್ಕಾಗಿ ಮನವಿ

    300x250 AD

    ಶಿರಸಿ: ಮಗನ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯ ನೀಡುವಂತೆ ಸಹ್ಯಾದ್ರಿ ಕಾಲೋನಿ ಸುಭಾಸ ನಗರದ ಮಂಜುಳಾ ಜಗದೀಶ ನಾಯ್ಕ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನನ್ನ ಮಗನಾದ ನವೀನ ನಾಯ್ಕ 15 ವರ್ಷದವನಾಗಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ. ಹೃದಯ ಸಂಬಂಧಿ ಸಮಸ್ಯೆ ಮತ್ತು ಬೋನ್ ಲಂಗ್ಸ್ ಸಮಸ್ಯೆ ಇದ್ದು, 2 ಶಸ್ತ್ರಚಿಕಿತ್ಸೆ ಆಗಿದೆ. ಇದರ ಖರ್ಚು ಈಗಾಗಲೇ ರೂ.3.50 ಲಕ್ಷ ತಗುಲಿದ್ದು, ಈಗ 3ನೇ ಶಸ್ತ್ರಚಿಕಿತ್ಸೆಯಾಗಿ ಜೆನಿಟ್ ಟೆಸ್ಟ್ನಿಂದ ಪಕ್ಕೆಲುಬಿನ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದು, ಇದರ ಖರ್ಚು ರೂ.3 ಲಕ್ಷ ತಗಲಬಹುದೆಂದು ತಿಳಿಸಿದ್ದಾರೆ.
    ನನ್ನ ಮಗನಿಗೆ ಜೀವದಾನ ಮಾಡಲು ನಿಮ್ಮ ಕೈಲಾದ ಸಹಾಯ ಮಾಡಿ ನನ್ನ ಮಗನ ಜೀವನ ಉಳಿಸಿಕೊಡಿ. ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವುದರಿಂದ ನಾನು ಅಶಕ್ತಳಾಗಿದ್ದೇನೆ. ಶಸ್ತ್ರಚಿಕಿತ್ಸೆ ಶೀಘ್ರವಾಗಿ ಆಗಬೇಕಾಗಿದೆ. ಆದ್ದರಿಂದ ತಮ್ಮಲ್ಲಿ ಕೈಜೋಡಿಸಿ ಹಣದ ಸಹಾಯವನ್ನು ಕೇಳುತ್ತಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಖಾತೆ ವಿವರ
    ಹೆಸರು: ಮಂಜುಳಾ ಜಗದೀಶ ನಾಯ್ಕ
    ಖಾತೆ ಸಂಖ್ಯೆ: 10072837257
    ಐಎಫ್‌ಎಸ್‌ಸಿ ಕೋಡ್: IDFB0080971
    ಮೊಬೈಲ್ ಸಂಖ್ಯೆ: Tel:+917795233847

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top