• Slide
    Slide
    Slide
    previous arrow
    next arrow
  • ಸ್ಕೊಡ್‌ವೆಸ್ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ

    300x250 AD

    ಶಿರಸಿ: ಪರಿಸರ ಸಂರಕ್ಷಣೆಯು ಒಂದು ದಿನದ ಕಾರ್ಯಕ್ರಮವಾಗದೆ ಅದು ನಿರಂತರವಾಗಿರಬೇಕು ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ ಹೇಳಿದರು.

    ಅವರು ಸ್ಕೊಡ್‌ವೆಸ್ ಸಂಸ್ಥೆ ಶಿರಸಿ,ಪ್ರಜಾವಾಣಿ ಹಾಗೂ ವಿದ್ಯೋದಯ ಪ್ರೌಢಶಾಲೆ ಯಡಳ್ಳಿ ಇವರ ಸಹಯೋಗದಲ್ಲಿ ಜೂ.6 ರಂದು ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ,ಪರಿಸರ ಸಂರಕ್ಷಣೆ ಮಾಡದೇ ಇದ್ದಲ್ಲಿ ನಿಸರ್ಗದಿಂದ ಸಿಗುವ ಉಚಿತ ಆಮ್ಲಜನಕಕ್ಕೆ ಮುಂದೊಂದು ದಿನ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಎದುರಾಗಬಹುದಾಗಿದೆ ಹಾಗಾಗಿ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಜೊತೆಗೆ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಧ್ಯಮಿಕ ಶಿಕ್ಷಣ ಪ್ರಸಾರ ಸಮಿತಿ ಅಧ್ಯಕ್ಷ ಆರ್.ವಿ.ಭಾಗ್ವತ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಜಾಗೃತವಾಗಬೇಕಿದೆ, ಪರಿಸರ ಹಾಗೂ ಗಿಡಗಳ ಸಂರಕ್ಷಣೆ ಆಗಬೇಕಿದೆ. ಗಿಡಗಳನ್ನು ನೆಡುವುದರ ಜೊತೆಗೆ ಅದರ ಉಳಿವಿಗೆ ಪ್ರತಿಯೊಬ್ಬರೂ ಶ್ರಮ ವಹಿಸುವುದು ಅತ್ಯವಶ್ಯಕವಾಗಿದೆ ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

    300x250 AD

    ಕಾರ್ಯಕ್ರಮದಲ್ಲಿ ವಿದ್ಯೋದಯ ಪ್ರೌಢಶಾಲೆ ಯಡಳ್ಳಿಯ ಹಿರಿಯ ಸಹ ಶಿಕ್ಷಕರಾದ ಕೆ.ಜಿ. ಭಟ್, ಸ್ಕೊಡ್‌ವೆಸ್ ಸಂಸ್ಥೆಯ ಉಮೇಶ್ ಮರಾಠಿ, ಕುಮಾರ್ ಪಟಗಾರ್, ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದು ಗೇರು, ಪೇರಲೆ, ಸೀತಾಫಲ, ರಾಮಫಲ, ನೆಲ್ಲಿ ಗಿಡಗಳನ್ನು ನೆಡುವುದರ ಮೂಲಕ ಹಸಿರು- ಉಸಿರು ಜಾಗೃತಿ ಮೂಡಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top