Slide
Slide
Slide
previous arrow
next arrow

ಮರು ಮೌಲ್ಯಮಾಪನ: ಲಯನ್ಸ್ ಪ್ರೌಢಶಾಲೆ ವಿದ್ಯಾರ್ಥಿನಿಗೆ 5ನೇ ರ‍್ಯಾಂಕ್

300x250 AD

ಶಿರಸಿ: 2022-23 ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದ ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ರ‍್ಯಾಂಕ್ ಬದಲಾವಣೆಯಾಗಿದೆ.

625 ಕ್ಕೆ 621 ಅಂಕಗಳಿಸಿದ ರವಿನಾ ಪನ್ವಾರ ರಾಜ್ಯಮಟ್ಟದಲ್ಲಿ 5 ನೇ ರ‍್ಯಾಂಕ್ ಹಾಗೂ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾಳೆ. 615 ಅಂಕ ಗಳಿಸಿರುವ ಕ್ಷಿತಿ ಹೆಗಡೆ ಶಾಲೆಗೆ ದ್ವಿತೀಯ ಸ್ಥಾನಗಳಿಸಿದ್ದಾಳೆ.
613 ಅಂಕಗಳಿಸಿರುವ ಸಿಂಧು ಗಾಂವಕರ್, ಶ್ರೀಲಕ್ಷ್ಮಿ ಹೆಗಡೆ ಹಾಗೂ ವಾದಿರಾಜ ಚಪ್ಪರ ಶಾಲೆಗೆ ತೃತೀಯ ಸ್ಥಾನಗಳಿಸಿದ್ದಾಳೆ. ಪ್ರಾಚಿ, ಅನಘಾ ಹೆಗಡೆ, ಸ್ನೇಹಾ ಕೊಳ್ವೇಕರ್ 609 ಪಡೆದು ಶಾಲೆಗೆ ನಾಲ್ಕನೇಯ ಸ್ಥಾನ, ಸ್ಪೂರ್ತಿ ಸುಬ್ರಾಯ ಹೆಗಡೆ 608 ಅಂಕಗಳೊಂದಿಗೆ ಶಾಲೆಗೆ ಐದನೇಯ ಸ್ಥಾನ ಪಡೆದಿದ್ದಾರೆ.

300x250 AD

ಶಾಲೆಯಿಂದ ಪರೀಕ್ಷೆಗೆ ಕುಳಿತ 90 ವಿದ್ಯಾರ್ಥಿಗಳಲ್ಲಿ 95 ಪ್ರತಿಶತಕ್ಕಿಂತ ಅಧಿಕ ಅಂಕಗಳನ್ನು 17 ವಿದ್ಯಾರ್ಥಿಗಳು, 90% ಅಧಿಕ ಅಂಕಗಳನ್ನು 34 ವಿದ್ಯಾರ್ಥಿಗಳು, 85% ಅಧಿಕ ಅಂಕಗಳನ್ನು 44 ವಿದ್ಯಾರ್ಥಿಗಳು ಪಡೆದಿದ್ದು, ಪ್ರಥಮ ವರ್ಗದಲ್ಲಿ 84 ವಿದ್ಯಾರ್ಥಿಗಳು, ದ್ವಿತೀಯ ವರ್ಗದಲ್ಲಿ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಶಾಲೆಯ ಪರಿಮಾಣಾತ್ಮಕ ಫಲಿತಾಂಶ 94.44% ಹಾಗೂ ಗುಣಾತ್ಮಕ ಫಲಿತಾಂಶ 89.25% ಆಗಿದ್ದು A+ ಗ್ರೇಡ್ ಫಲಿತಾಂಶದ ಸಾಧನೆ ಮೆರೆದಿದೆ. A+ ಶ್ರೇಣಿ 34 ವಿದ್ಯಾರ್ಥಿಗಳು, A ಶ್ರೇಣಿ 25 ವಿದ್ಯಾರ್ಥಿಗಳು ಪಡೆದಿರುತ್ತಾರೆ. ವಿಷಯವಾರು ಇಂಗ್ಲೀಷ್‌ನಲ್ಲಿ 5, ಕನ್ನಡ 21, ಹಿಂದಿ 8, ಸಂಸ್ಕೃತ 10, ಗಣಿತ 1, ಸಮಾಜ ವಿಜ್ಞಾನದಲ್ಲಿ ಓರ್ವ ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಪ್ರಥಮ ಭಾಷೆ ಇಂಗ್ಲೀಷ್, ತೃತೀಯ ಭಾಷೆ ಸಂಸ್ಕೃತ ಹಾಗೂ ವಿಜ್ಞಾನ ವಿಷಯಗಳಲ್ಲಿ ಶೇ 100ಕ್ಕೆ 100 ವಿದ್ಯಾರ್ಥಿಗಳು ಉತ್ತೀರ್ಣತೆ ದಾಖಲಿಸಿದ್ದಾರೆ
ಈ ಸಾಧನೆಗೆ ಆಡಳಿತ ಮಂಡಳಿಯು ಸಾಧಕ ವಿದ್ಯಾರ್ಥಿಗಳನ್ನು, ಪಾಲಕರನ್ನು, ಶಿಕ್ಷಕರನ್ನು, ಶಿಕ್ಷಕೇತರ ಸಿಬ್ಬಂದಿಗಳನ್ನು ಅಭಿನಂದಿಸಿದೆ.

Share This
300x250 AD
300x250 AD
300x250 AD
Back to top