• Slide
    Slide
    Slide
    previous arrow
    next arrow
  • ಜಿ.ಪಂ.,ತಾ.ಪಂ. ಚುನಾವಣೆಯಲ್ಲಿ ಒಗ್ಗಟ್ಟಾಗಿ ಶ್ರಮಿಸಲು ವಿ.ಎಸ್. ಪಾಟಿಲ್ ಕರೆ

    300x250 AD

    ಯಲ್ಲಾಪುರ: ನನಗಿಂತ ಹೆಚ್ಚು ನೋವುಂಡವರು ಕಾರ್ಯಕರ್ತರು. ನೀವು ಹೆದರುವ ಅಗತ್ಯವಿಲ್ಲ. ಪಕ್ಷದ ಶಾಸಕರಿಲ್ಲದಿದ್ದರೂ, ಎಲ್ಲರೂ ಸೇರಿ ಜನರಿಗೆ ನೀಡಿದ ಭರವಸೆ ಈಡೇರಿಸೋಣ ಎಂದು ಕಳೆದ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಹೇಳಿದರು.

    ಪಟ್ಟಣದ ಎಪಿಎಂಸಿಯ ಅಡಿಕೆ ಭವನದಲ್ಲಿ ಶನಿವಾರ ನಡೆದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಯಕರ್ತರನ್ನು ಮುಖಂಡರನ್ನಾಗಿಸುವ ಕಾರ್ಯ ಕಾರ್ಯಕರ್ತರಿಂದ ಮಾತ್ರ ಸಾಧ್ಯ.ಪಕ್ಷದ ಟಿಕೆಟ್ ಘೋಷಣೆ ಆದ ನಂತರ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಶ್ರಮಿಸಬೇಕು. ಮುಂಬರುವ ಜಿ.ಪಂ., ತಾಪಂ. ಚುನಾವಣೆಯಲ್ಲಿಯಾದರೂ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೊಣ ಎಂದ ಅವರು ಸರ್ಕಾರ ನಮ್ಮದೇ ಇದೆ ಒಳ್ಳೆಯ ಅಧಿಕಾರಿಗಳನ್ನು ತರುವ ಮೂಲಕ ಬಡವರ ಕೆಲಸ ಮಾಡೋಣ ಎಂದರು.

    ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿ, ಅತ್ಯಂತ ಕಡಿಮೆ ಮತದಲ್ಲಿ ವಿ.ಎಸ್. ಪಾಟೀಲರು ಸೋಲುಂಡಿರುವುದು ಜಿಲ್ಲೆಗೇ ನೋವಾಗಿರುವ ಸಂಗತಿ. ಈ ಚುನಾವಣೆಯಲ್ಲಿ ಏನು ತಪ್ಪಾಗಿದೆ ಎಂಬುದರ ವಿಮರ್ಶೆ ಆಗಬೇಕಿದೆ. ಈ ಭಾಗದಲ್ಲಿ ನಮ್ಮ ಪಕ್ಷದ ಶಾಸಕರಿಲ್ಲದಿದ್ದರೂ, ವಿ.ಎಸ್. ಪಾಟೀಲರೇ ನಮ್ಮ ಮುಖಂಡರು. ಸ್ಥಾನ ಇಲ್ಲದೇ ಇರಬಹುದು, ಆದರೆ ಪಕ್ಷ ಅವರೊಂದಿಗೆ ಇದೆ. ಅವರಿಗೆ ಎಲ್ಲ ಅಧಿಕಾರವನ್ನು ನೀಡುತ್ತದೆ ಎಂದರು.
    ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್.ಕೆ.ಭಟ್ಟ ಮೆಣಸುಪಾಲ ಮಾತನಾಡಿ, ವಿ.ಎಸ್. ಪಾಟೀಲ ಸೋತಿಲ್ಲ. ಅವರನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಸೋತಿದ್ದಾರೆ. ನಾವು ಮತ್ತೆ ತಪ್ಪು ಮಾಡಿ ಎಡವಿದ್ದೇವೆ.

    300x250 AD

    ರಾಜಕಾರಣಿಯಾದವನು ಮುಂದಿನ ಚುನಾವಣೆ ಬಗ್ಗೆ ಆಲೋಚನೆ ಮಾಡುತ್ತಾನೆ. ಆದ ತಪ್ಪನ್ನು ವಿಮರ್ಶಿಸಿಸೊಣ. ಆದರೆ ಅದರ ಸಲುವಾಗಿ ಕೊರಗದೆ ಮುಂಬರುವ ಚುನಾವಣೆಗಳನ್ನು ಗೆಲ್ಲೋಣ ಎಂದರು.
    ವಿ.ಎಸ್.ಭಟ್ಟ, ರವಿ ನಾಯ್ಕ, ಡಿ.ಎನ್.ಗಾಂವ್ಕರ್ ಮುಂತಾದವರು ಮಾತನಾಡಿದರು. ಪ್ರಮುಖರಾದ ದಿಲೀಪ ರೊಖಡೆ, ಲಾರೆನ್ಸ್ ಸಿದ್ದಿ, ಉಲ್ಲಾಸ ಶಾನಭಾಗ, ಪ್ರಶಾಂತ ಸಭಾಹಿತ, ಎಂ.ಜಿ.ಭಟ್ಟ ನಂದೊಳ್ಳಿ, ಸರಸ್ವತಿ ಗುನಗಾ, ನರಸಿಂಹ ನಾಯ್ಕ, ಸೂರ್ಯನಾರಾಯಣ ಭಟ್ಟ, ರಾಘವೇಂದ್ರ ಭಟ್ಟ, ಪುಜಾ ನೇತ್ರೇಕರ, ಮುಶ್ರತ ಖಾನ್, ಕಾಸಿಮ ಸಾಬ್, ವೇದಿಕೆಯಲ್ಲಿದ್ದರು. ವಿಶ್ವೇಶ್ವರ ಜೋಶಿ ಸ್ವಾಗತಿಸಿದರು, ರವಿಚಂದ್ರ ನಾಯ್ಕ ನಿರೂಪಿಸಿದರು, ಎನ್.ಎನ್.ಹೆಬ್ಬಾರ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top