Slide
Slide
Slide
previous arrow
next arrow

ಸುರಿನಾಮ್‌ಗೆ ಭಾರತೀಯರ ಆಗಮನದ 150ನೇ ಆಚರಣೆಯಲ್ಲಿ ರಾಷ್ಟ್ರಪತಿ ಭಾಗಿ

300x250 AD

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ತಡರಾತ್ರಿ ಸುರಿನಾಮ್‌ನ ರಾಜಧಾನಿ ಪರಮಾರಿಬೋ ತಲುಪಿದರು. ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿ ಅವರ ಆಹ್ವಾನದ ಮೇರೆಗೆ ಅವರು ಸುರಿನಾಮ್‌ಗೆ ಭೇಟಿ ನೀಡಿದ್ದಾರೆ. ಜೋಹಾನ್ ಅಡಾಲ್ಫ್ ಪೆಂಗಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮುರ್ಮು ಅವರಿಗೆ ಗಾರ್ಡ್ ಆಫ್ ಹಾನರ್ ನೀಡಲಾಯಿತು.

ರಾಷ್ಟ್ರಪತಿಗಳ ಜೊತೆಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಸಂಸದೆ ರಮಾ ದೇವಿ ಇದ್ದಾರೆ.

ಇಂದು ಸುರಿನಾಮ್‌ಗೆ ಭಾರತೀಯರ ಆಗಮನದ 150 ನೇ ವಾರ್ಷಿಕೋತ್ಸವದ ಆಚರಣೆ ನಡೆಯುತ್ತಿದ್ದು, ಇದರಲ್ಲಿ ಮುರ್ಮು ಮುಖ್ಯ ಅತಿಥಿಯಾಗಿರುವುದರಿಂದ ಈ ಭೇಟಿಯು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ.

ಸುರಿನಾಮ್ ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿ ನೆಲೆಗೊಂಡಿವೆ, ಸುರಿನಾಮ್ ದಕ್ಷಿಣ ಅಮೆರಿಕಾದ ಖಂಡದ ಅತ್ಯಂತ ಚಿಕ್ಕ ದೇಶವಾಗಿದೆ.

300x250 AD

ಭಾರತ-ಸುರಿನಾಮ್ ಸಂಬಂಧಗಳು ಸೌಹಾರ್ದಯುತವಾಗಿವೆ ಮತ್ತು ದೊಡ್ಡ ಸಂಖ್ಯೆಯ ಅನಿವಾಸಿ ಭಾರತೀಯರು ಇಲ್ಲಿ ಇರುವ ಕಾರಣದಿಂದಾಗಿ ಉಭಯ ದೇಶಗಳ ಬಾಂಧವ್ಯ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂದಿಗೂ ಅಲ್ಲಿ ಭಾರತೀಯ ಸಂಪ್ರದಾಯಗಳನ್ನು ಕಾಣಬಹುದು.

ಇಂದು, ಮುರ್ಮು ಸುರಿನಾಮ್ ಅಧ್ಯಕ್ಷರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಸುರಿನಾಮ್‌ಗೆ ಭಾರತೀಯರ ಆಗಮನದ 150 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಅದರ ನಂತರ, ಮುರ್ಮು ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ಅಧ್ಯಕ್ಷರ ಭವನದಿಂದ ಸಾಂಸ್ಕೃತಿಕ ಮೆರವಣಿಗೆಯನ್ನು ವೀಕ್ಷಿಸುತ್ತಾರೆ. ಸುರಿನಾಮ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ.

Share This
300x250 AD
300x250 AD
300x250 AD
Back to top