Slide
Slide
Slide
previous arrow
next arrow

ಈಡಿಗ ಸಮಾಜದವರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು: ಶ್ರೀನಿವಾಸ ಪೂಜಾರಿ

300x250 AD

ಗೋಕರ್ಣ: ನಮ್ಮ ಸಮಾಜದಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದು ಅಂತವರನ್ನು ದತ್ತು ತೆಗೆದುಕೊಂಡರೆ ಅವರನ್ನು ಈ ಸಮಾಜಕ್ಕೆ ವೈದ್ಯರಾಗಿ, ಇಂಜಿನಿಯರ್‌ಗಳಾಗಿ ನೀಡಬಹುದು. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ದಿಶೆಯಲ್ಲಿ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಮತ್ತೊಬ್ಬರನ್ನು ದೂಷಣೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಾಮಧಾರಿ ಸಭಾಭವನದಲ್ಲಿ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ ಹಾಗೂ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಚಿಂತನ ಶಿಬಿರದಲ್ಲಿ ಮಾತನಾಡಿದರು. ನಮ್ಮ ಈಡಿಗ ಸಮುದಾಯದಲ್ಲಿ ಸಾಕಷ್ಟು ಶ್ರೀಮಂತರಿದ್ದಾರೆ. ಅಂತವರು ಸಮಾಜದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಬೇಕು ಎಂದರು.

ಚೆನ್ನಪ್ಪ ರೆಡ್ಡಿ ವರದಿ ಪ್ರಕಾರ ರಾಜ್ಯದಲ್ಲಿ ಈಡಿಗ ಸಮಾಜದ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅದರಂತೆ 80 ರ ದಶಕದಲ್ಲಿ ಕಾಡುತ್ತಿದ್ದ ಬಡತನದಿಂದಾಗಿ ಕೆಲವರು ನೂರು ರೂಪಾಯಿ ನೋಡುವುದು ಕೂಡ ಕಷ್ಟವಾಗುತ್ತಿತ್ತು. ಆದರೆ ಅದೇ ಸಮಾಜದ ಜನಾರ್ಧನ ಪೂಜಾರಿ ಆರ್ಥಿಕ ಸಚಿವ ಆದ ನಂತರ ಸಾಲಮೇಳವನ್ನು ಮಾಡಿದ್ದರ ಪರವಾಗಿ ಸಾಮಾಜ್ಯ ಜನರು ಕೂಡ  ಸಾಲ ಪಡೆದು ಉದ್ಯೋಗ ಮಾಡುವಂತಾಯಿತು. ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ಉನ್ನತ ಶಿಕ್ಷಣ ಪಡೆದದ್ದು. ಎಸ್.ಬಂಗಾರಪ್ಪ ಎಂದರೆ ಆನೆ ನಡೆದದ್ದೇ ದಾರಿ ಎನ್ನುವಂತಾಗಿತ್ತು. ಆದರೆ ಈಗ ಮತ್ತೊಬ್ಬ ಬಂಗಾರಪ್ಪನನ್ನು ಕಾಣಲು ಸಾಧ್ಯವಿಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ಸೂರಿಲ್ಲದವರಿಗೆ ಆಶ್ರಯ ಮನೆಯನ್ನು ನೀಡಿದವರು ಇದೇ ಬಂಗಾರಪ್ಪನವರು. ಮೆಡಿಕಲ್ ಕಾಲೇಜ್ ಆರಂಭಿಸಿದವರು ಜಾಲಪ್ಪನವರು. ಹಾಗೇ ಸಿನಿಮಾ ರಂಗದಲ್ಲಿ ಡಾ. ರಾಜಕುಮಾರರವರು ದೊಡ್ಡ ಸ್ಥಾನವನ್ನು ಪಡೆದವರು. ಇಂತವರನ್ನು ಮತ್ತೆ ನಾವು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.

300x250 AD

ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಸಮಸ್ತ ಈಡಿಗರು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಶ್ರೀ ನಾರಾಯಣಗುರು ಈಡಿಗ ಅಭಿವೃದ್ಧಿ ನಿಗಮ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ನಿಯೋಗದೊಂದಿಗೆ ಬೇಟಿ ನೀಡಿ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಕೋರಲಾಗುವುದು. ಹಾಗೇ ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕವಾಗಿ ಅನುದಾನವನ್ನು ನೀಡಲು ಪ್ರಯತ್ನಿಸಲಾಗುವುದು. ಉತ್ತಮ ಶಿಕ್ಷಣ ಪಡೆದಾಗ ಮಾತ್ರ ವಿವಿಧ ಹುದ್ದೆಗಳಿಗೆ ತೆರಳಲು ಸಾಧ್ಯವಿದೆ ಎಂದರು. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದು, ಮಾಜಿ ಸಚಿವ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸಂವಾದ ನಡೆಸಿದರು. ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top