Slide
Slide
Slide
previous arrow
next arrow

ಸಿಟಿ ಬಸ್ ಸಂಚಾರ ಪುನರಾರಂಭಿಸಲು ಆಗ್ರಹ

300x250 AD

ದಾಂಡೇಲಿ: ನಗರದ ನಿರ್ಮಲನಗರ ಮತ್ತು ಸುದರ್ಶನ ನಗರಕ್ಕೆ ಈ ಹಿಂದೆ ಸಿಟಿ ಬಸ್ ಸಂಚಾರವಿದ್ದು, ಕಳೆದ ಆರೇಳು ತಿಂಗಳಿನಿಂದ ಇಲ್ಲಿಗೆ ಸಿಟಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗತೊಡಗಿದೆ.

ಈ ನಿಟ್ಟಿನಲ್ಲಿ ಸುದರ್ಶನ ನಗರ ಮತ್ತು ನಿರ್ಮಲನಗರದ ಪ್ರಮುಖರು ದಾಂಡೇಲಿ ಸಾರಿಗೆ ಘಟಕದ ವ್ಯವಸ್ಥಾಪಕರನ್ನು ಭೇಟಿಯಾಗಿ ಸಿಟಿ ಬಸ್ ಸಂಚಾರದ ಪುನರಾರಂಭಕ್ಕೆ ಮನವಿಯನ್ನು ಮಾಡಿದ್ದಾರೆ. ಆದ್ದರಿಂದ ಆದಷ್ಟು ಶೀಘ್ರ ಎಂದಿನಂತೆ ನಿರ್ಮಲನಗರ ಮತ್ತು ಸುದರ್ಶನ ನಗರಕ್ಕೆ ಸಿಟಿ ಬಸ್ ಸಂಚಾರವನ್ನು ಪುನರಾರಂಭಿಸಬೇಕೆಂದು ಬಂಗೂರನಗರ ಜ್ಯೂನಿಯರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಯು.ಎಸ್.ಪಾಟೀಲ್ ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top