ಗೋಕರ್ಣ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕಾರವಾರದಿಂದ ಮಂಗಳೂರಿನವರೆಗೆ ಹಮ್ಮಿಕೊಂಡಿರುವ ಸೈಕಲ್ ಜಾಥಾ ಹಾಗೂ ಕಡಲತೀರ ಸ್ವಚ್ಛತಾ ಅಭಿಯಾನ ಇಲ್ಲಿಯ ಮುಖ್ಯ ಕಡಲತೀರಕ್ಕೆ ಆಗಮಿಸಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿದರು.
ಜಿಲ್ಲಾ ಪರಿಸರ ಅಧಿಕಾರಿ ಬಿ.ಸಂತೋಷ ಮಾತನಾಡಿ, ಕಡಲತೀರದಲ್ಲಿ ಕಸ-ಕಡ್ಡಿ ಎಸೆಯುವುದು ಸೇರಿದಂತೆ ತ್ಯಾಜ್ಯಗಳನ್ನು ಸ್ಥಳೀಯ ಗ್ರಾ.ಪಂ.ನವರು ತೆಗೆದುಕೊಂಡು ಹೋಗುವಂತೆ ನೋಡಿಕೊಳ್ಳಬೇಕು. ಸಮುದ್ರದಲ್ಲಿ ತ್ಯಾಜ್ಯಗಳನ್ನು ಎಸೆದರೆ ಅದರಿಂದ ಸಾಕಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆಯಿರುತ್ತದೆ ಎಂದರು.
ಮುಖ್ಯ ಕಡಲತೀರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಈ ಅಭಿಯಾನದಲ್ಲಿ ಎನ್‌ಸಿಸಿ ಉಡಾನ್ ತಂಡದ ಸೈಕ್ಲಿಸ್ಟ್ ಸುನೀಲ್, ಈಜುಪಟು ಸುಚೇತಾ, ಗ್ರಾ.ಪಂ. ಸದಸ್ಯೆ ಪಾರ್ವತಿ ಶೆಟ್ಟಿ, ಸಿಬ್ಬಂದಿ ಇತರರು ಪಾಲ್ಗೊಂಡಿದ್ದರು.