• Slide
    Slide
    Slide
    previous arrow
    next arrow
  • ಟಿ.ಎಸ್.ಎಸ್.ಮಾನ್ಸೂನ್ ಮೇಳಕ್ಕೆ ಶಾಸಕ ಭೀಮಣ್ಣ ನಾಯ್ಕ್ ಚಾಲನೆ

    300x250 AD

    ಶಿರಸಿ: ಇದುವರೆಗೂ ನನಗೆ ಎಲ್ಲ ಕ್ಷೇತ್ರಗಳಲ್ಲಿ ಸಹಾಯ ಸಹಕಾರ ನೀಡುತ್ತಿರುವ ಟಿ.ಎಸ್.ಎಸ್ ಸಂಸ್ಥೆಯನ್ನು ನಾನು ಎಂದಿಗೂ ಮರೆಯುವಂತಿಲ್ಲ. ಸಂಸ್ಥೆಯಜೊತೆಯಲ್ಲಿ ನಾನು ಸದಾ ಇರುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ಮುಂಗಾರು ಸಮೀಪಿಸುತ್ತಿದ್ದಂತೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಟಿ.ಎಸ್.ಎಸ್.ನಲ್ಲಿ“ಮಾನ್ಸೂನ್ ಮೇಳ 2023” ಆಯೋಜಿಸಲಾಗಿದ್ದು, ಜೂನ್ 01 ರಿಂದ ಜೂನ್ 10ರವರೆಗೆ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡಿನ ಸುಪರ್‌ ಮಾರ್ಕೆಟ್‌ಗಳಲ್ಲಿ ಆಯ್ದ ಸಾಮಗ್ರಿಗಳ ಮೇಲೆ ವಿಶೇಷ ರಿಯಾಯಿತಿಯ ಸುರಿಮಳೆಯಾಗಲಿದೆ. ಮೇಳದ ಉದ್ಘಾಟಕರಾಗಿ ಆಗಮಿಸಿದ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ ನಾಯ್ಕ ಜೂನ್ 01 ರಂದು ರಿಬ್ಬನ್‌ ಕತ್ತರಿಸುವುದರೊ0ದಿಗೆ ದೀಪ ಬೆಳಗಿಸುವುದರ ಮೂಲಕ ಮಾನ್ಸೂನ್ ಮೇಳಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ನಾನು ಈ ದಿನ ಕೇವಲ ಶಾಸಕನಾಗಿ ಅಲ್ಲದೇ ಸಂಘದ ಸದಸ್ಯನಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿರುತ್ತೇನೆ.ನನಗೆ ಪ್ರತಿ ಹಂತದಲ್ಲೂ ಸಹಕಾರ ನೀಡುತ್ತಾ ಬಂದಿರುವ ಈ ಸಂಸ್ಥೆಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

    ಕಡವೆ ಹೆಗಡೆಯವರ ಕಾಲದಿಂದಲೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ಬಂದಿರುವ ಸಂಸ್ಥೆಯು ಇ0ದು ಹೆಮ್ಮರವಾಗಿ ಬೆಳೆದು ನಿಂತಿರುವುದು ಖುಷಿಯ ಸಂಗತಿಯಾಗಿದೆ. ಒ0ದೇ ಸೂರಿನಡಿಯಲ್ಲಿ ಗ್ರಾಹಕರ ಅವಶ್ಯಕತೆಗಳಿಗನುಗುಣವಾಗಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾ ಮಾನ್ಸೂನ್ ಸಂದರ್ಭದಲ್ಲಿ ಮಳೆಗಾಲದ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಪೂರೈಸುವ ಸಲುವಾಗಿ ಈ ಮೇಳವನ್ನು ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ನಾನು ಸಂಸ್ಥೆಯ ಜೊತೆಗೂಡಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಹಾಯ ಮಾಡುತ್ತೇನೆ. ಈ ಮೇಳಕ್ಕೆ ಗ್ರಾಹಕರಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆತು ಮೇಳವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

    300x250 AD

    ಈ ಸಂದರ್ಭದಲ್ಲಿ ಸ0ಘದ ಆಡಳಿತ ಮಂಡಳಿ ಸದಸ್ಯರುಗಳು, ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳು, ಸಂಘದ ಹಿತೈಷಿಗಳಾದ ಎಸ್.ಕೆ.ಭಾಗ್ವತ್, ದೀಪಕ ಹೆಗಡೆ ದೊಡ್ಡೂರು ಮತ್ತು ಸಂಘದ ಸಿಬ್ಬ0ದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
    ಮಳೆಗಾಲದ ಅಗತ್ಯಗಳಾದ ರೇನ್‌ಕೋಟ್, ಛತ್ರಿ, ಪಾದರಕ್ಷೆಗಳು, ಶಾಲಾ ಮಕ್ಕಳ ಅಗತ್ಯಗಳಾದ ನೋಟ್‌ಬುಕ್, ಪೆನ್, ಪೆನ್ಸಿಲ್, ಸ್ಟೇಷನರಿ, ಕೃಷಿ ಅಗತ್ಯಗಳಾದ ಕೃಷಿ ಉಪಕರಣಗಳು, ಯಂತ್ರಗಳು, ಸಿಲ್‌ಫಾಲಿನ್, ನರ್ಸರಿ ಬ್ಯಾಗ್ಸ್,ಇನ್ವರ್ಟರ್, ಬ್ಯಾಟರಿಹಾಗೂ ಟಿ.ಎಸ್.ಎಸ್. ಬ್ರಾಂಡ್‌ನಗೇರು ಬೀಜಗಳು, ಸೌಂದರ್ಯಸಾಧನಗಳು ಹಾಗೂ ಮಾವಿನ ಹಣ್ಣುಇತ್ಯಾದಿ ಸಾಮಗ್ರಿಗಳ ಮೇಲೆ ಶೇ.5 ರಿಂದ ಶೇ.50 ರವರೆಗೆವಿಶೇಷ ರಿಯಾಯಿತಿದೊರೆಯಲಿದೆ.

    ಮಾನ್ಸೂನ್ ಮೇಳದ ಸಂದರ್ಭದಲ್ಲಿ ಶಾಲಾ ಮಕ್ಕಳು ಅಂಕಪಟ್ಟಿಯ ನಕಲು ಪ್ರತಿಯನ್ನು ತೋರಿಸಿ ತಾವು ಪಡೆದ ಅಂಕಗಳ ಆಧಾರದ ಮೇಲೆ ಶಾಲಾ ಸಾಮಗ್ರಿಗಳ ಖರೀದಿಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಸದಸ್ಯರು ಹಾಗೂ ಗ್ರಾಹಕರು ಮಕ್ಕಳೊಂದಿಗೆ ಈ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top