ಅಂಕೋಲಾ: ಉದ್ಯೋಗ ಮೇಳಕ್ಕೆ ಆಗಮಿಸುವ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಹೇಳಿದರು.
ಅವರು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ 4ನೇ ವರ್ಷದ ರಾಜ್ಯಮಟ್ಟದ ಉದ್ಯೋಗಮೇಳ ಉದ್ಘಾಟಿಸಿ ಮಾತನಾಡುತ್ತಾ, ಕೆ.ಎಲ್.ಇ. ಸಂಸ್ಥೆ ಪ್ರಪಂಚದಾದ್ಯAತ ಪ್ರಸಿದ್ಧವಾಗಿರುವ ಸಂಸ್ಥೆಯಾಗಿದ್ದು, ವಿವಿಧ ವಿದಾಯಕ ಕಾರ್ಯಕ್ರಮಗಳ ಮೂಲಕ ಗುಣಾತ್ಮಕ ಶಿಕ್ಷಣ ನೀಡುತ್ತ ಪ್ರಸಿದ್ಧಿ ಪಡೆದಿದೆ. ಇಲ್ಲಿ ತರಬೇತಿ ಪಡೆಯುವ ಶಿಕ್ಷಕರು ಉತ್ತಮ ಸಂವಹನ ಕೌಶಲ್ಯ ಹೊಂದಿದವರಾಗಿದ್ದು, ಇವರಿಗೆ ರಾಜ್ಯದಾದ್ಯಂತ ಬೇಡಿಕೆ ಇದೆ. ಆದ್ದರಿಂದ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ವಿನಾಯಕ ಜಿ.ಹೆಗಡೆ, ಯಾವುದೇ ಸಂಸ್ಥೆ ಶಿಕ್ಷಕರಿಗೆ ಪ್ರೊತ್ಸಾಹ ನೀಡುವ ಮೂಲಕ ಉದ್ಯೋಗಾವಕಾಶ ಹೆಚ್ಚಿಸಿದೆ ಪ್ರತಿ ಸಂಸ್ಥೆಗೆ ಅಧಿಕ ಪ್ರಮಾಣದ ಶಿಕ್ಷಕರ ಅಗತ್ಯತೆ ಇದ್ದು ಆದರೆ ಗುಣಾತ್ಮಕ ಶಿಕ್ಷಕರ ಕೊರತೆ ಇದೆ ಎಂದರು.
ರಕ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಮಂಜುನಾಥ ಇಟಗಿ ಸ್ವಾಗತಿಸಿದರು. ಇದೇ ಸಂದರ್ಬದಲ್ಲಿ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಗಳಾಗಿ ಆಗಮಿಸಿದ ಡಾ.ಮೀನಲ್ ನಾರ್ವೇಕರ ಮಾತನಾಡಿದರು. ಉಪನ್ಯಾಸಕಿ ಅಮ್ರಿನಾಜ ಶೇಖ್ ವಂದಿಸಿದರು. ಉಪನ್ಯಾಸಕಿ ಪೂರ್ವಿ ಹಳ್ಗೇಕರ ನಿರೂಪಿಸಿದರು. ಉದ್ಯೋಗ ಮೇಳದಲ್ಲಿ 40 ಸಂಸ್ಥೆಗಳು ಹಾಗೂ 134 ಶಿಕ್ಷಕರು ನೊಂದಣಿ ಮಾಡಿಕೊಂಡಿದ್ದರು.