• Slide
    Slide
    Slide
    previous arrow
    next arrow
  • ಜಿ.ಎಚ್.ನಾಯಕ ನಿಧನ: ಶಿಕ್ಷಕರ ಸಂಘದಿಂದ ಸಂತಾಪ

    300x250 AD

    ಅಂಕೋಲಾ: ಪ್ರೊ.ಜಿ.ಎಚ್.ನಾಯಕ ನಮ್ಮನಗಲಿದ್ದಾರೆ. ಆಳವಾದ ಅಧ್ಯಯನ ಅಪಾರ ಜ್ಞಾನ ಹೊಂದಿದ್ದ ನಾಯಕರು ಮೌಲ್ಯನಿಷ್ಟ ವಿಮರ್ಶೆಯ ಮೂಲಕ ವಿಮರ್ಶೆಗೆ ಹೊಸದಿಕ್ಕನ್ನು ತೋರಿಸಿದವರು. ಇದರ ಪರಿಣಾಮ ತೀವ್ರ ಪ್ರತಿರೋಧ, ಸಂಕಷ್ಟವನ್ನು ಎದುರಿಸಿದರೂ ತಮ್ಮದೇ ಕಾಲುದಾರಿಯಲ್ಲಿ ನಡೆದು ಹೆದ್ದಾರಿಯನ್ನಾಗಿಸಿದ ಜಿ.ಎಚ್.ಎನ್. ಅವರ ಕೊಡುಗೆ ಅಪಾರ ಎಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ ಜಗದೀಶ ನಾಯಕ ಹೇಳಿದರು.
    ಅಗಲಿದ ಕನ್ನಡ ನಾಡಿನ ಶ್ರೇಷ್ಠ ಸಾಹಿತಿ, ಖ್ಯಾತ ವಿಮರ್ಶಕ ಪ್ರೊ.ಜಿ.ಎಚ್.ನಾಯಕ ಅವರಿಗೆ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಅಂಕೋಲಾದ ಸೂರ್ವೆಯವರಾದ (ಮೈಸೂರು ಕಾರ್ಯಕ್ಷೇತ್ರ) ಮಾನ್ಯರು ಉತ್ತರ ಕನ್ನಡ ಜಿಲ್ಲೆಗೆ ಬಂದಿರುವ ಒಂದೇ ಒಂದು ಪಂಪ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯ. ಯಾವುದೇ ಪ್ರಶಸ್ತಿ ಸನ್ಮಾನವನ್ನು ಬಯಸದ ಇವರು ಪಂಪ ಪ್ರಶಸ್ತಿಯನ್ನು ಮನೆಯಲ್ಲಿ ಸ್ವೀಕರಿಸುವ ಮೂಲಕ ಸರಳತೆ ಮೆರೆಯುತ್ತಾರೆ. ಹತ್ತಾರು ಸಾಹಿತ್ತಿಕ ಪ್ರಶಸ್ತಿಗೆ ಭಾಜನರಾದರೂ ಸರಳತೆ ಆದರ್ಶ ಜೀವನದ ಮೂಲಕ ಅನುಸರಣೀಯರಾಗುತ್ತಾರೆ. ನಾಯಕರ ನಿಧನ ನಮಗೆಲ್ಲ ಅಪಾರ ನೋವು ತಂದಿದೆ. ನಾಡು ಬಡವಾಗಿದೆ ಎಂದು ಅವರು ಹೇಳಿದರು.
    ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ರಾಜು ಎಚ್. ನಾಯಕ ಉಪಾಧ್ಯಕ್ಷರಾದ ಮಂಜುನಾಥ ವಿ. ನಾಯಕ, ಭಾರತಿ ಬಿ. ನಾಯಕ, ಜಿಲ್ಲಾ ಸಹ ಕಾರ್ಯದರ್ಶಿ ಮಾಂಜುನಾಥ ಬಿ. ನಾಯಕ, ಜಿಲ್ಲಾ ಖಜಾಂಚಿ ಶೇಖರ ಗಾಂವಕರ, ಸದಸ್ಯರಾದ ಲಕ್ಷ್ಮೀ ನಾಯಕ, ಸವಿತಾ ಗಾಂವಕರ, ತುಕಾರಾಮ ಬಂಟ, ವೆಂಕಮ್ಮ ನಾಯಕ, ಶೋಭಾ ನಾಯಕ, ಆನಂದು ನಾಯ್ಕ, ದಿವಾಕರ ದೇವನಮನೆ, ಸಂಜೀವ ನಾಯಕ, ವಿ.ಪಿ. ನಾಯ್ಕ ಜಿ.ಎಚ್. ನಾಯಕರ ಕೊಡುಗೆಗಳನ್ನು ಸ್ಮರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top