• Slide
  Slide
  Slide
  previous arrow
  next arrow
 • ಗಾನ ರಸಿಕರ ಮನ ತಣಿಸಿದ ಗಿಳಿಗುಂಡಿಯ ನಾದಸಿರಿ

  300x250 AD

  ಶಿರಸಿ:ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಆಯೋಜಿಸಿದ್ದÀ ‘ನಾದಸಿರಿ– 2023’ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಮೇ 27ರಂದು ಗಿಳಿಗುಂಡಿಯ ‘ವೆಂಕಟೇಶ ನಿಲಯ’ದ ಮನೆಯಂಗಳದಲ್ಲಿ ನೆರವೇರಿತು.
  ಐ್ರಸ್ಟ್ನ ಗೌರವಾಧ್ಯಕ್ಷ ಎಂ.ಕೆ.ಹೆಗಡೆ ಧಾರವಾಡ, ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೇಕಲ್, ಪ್ರಸಿದ್ಧ ಜಾದೂಗಾರರಾದ ಪ್ರೊ.ಶಂಕರ ಹಾಗೂ ಟ್ರಸ್ಟಿನ ಇತರ ಸದಸ್ಯರು ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
  ಕಾರ್ಯಕ್ರಮವನ್ನು ತನ್ಮಯಿ ಹೆಗಡೆಯವರ ರಾಗ-ಬೃಂದಾವನ ಸಾರಂಗದೊಂದಿಗೆ ಆರಂಭಗೊಂಡಿತು. ಅನಂತರದಲ್ಲಿ ಕು. ನಿಹಾರಿಕಾ ದೇವಾಜೆಯವರು ರಾಗ ‘ಮಧುವಂತಿ’ಯನ್ನು ಪ್ರಸ್ತುತ ಪಡಿಸಿದರು. ರಯೀಸ್ ಖಾನ್ ಪುಣೆ, ಇವರು ರಾಗ-ಮುಲ್ತಾನಿ ಹಾಗೂ ರಾಗ-ತಿಲಂಗ್‌ನಲ್ಲಿ ಗಾಯನ ಪ್ರಸ್ತುತ ಪಡಿಸಿದರು. ಶ್ರೀ ನಾಗರಾಜ ಹೆಗಡೆ, ಶಿರನಾಲ ಅವರ ರಾಗ– ಯಮನ್ ಮತ್ತು ದೇಶಿ ಬಾನ್ಸುರಿ ವಾದನವು ಜನ-ಮನ ತಣಿಸಿತು. ಸಂಜೆಯ ಗಾಯನ ಪ್ರಸ್ತುತಿಯಲ್ಲಿ ಸಂಗೀತಾ ಹೆಗಡೆ ಇವರು ‘ಶ್ಯಾಮ್ ಕಲ್ಯಾಣ’ ರಾಗವನ್ನು ಹಾಡಿ ಸಂಗೀತ ಸಂಚಲನಗೊಳಿಸಿದರು.
  ತದನಂತರ ರಾತ್ರಿಯ ಮೊದಲ ಪ್ರಸ್ತುತಿಯಾಗಿ ಪ್ರತಿಭಾ ಹೆಗಡೆಯವರ ಗಾಯನದಲ್ಲಿ ರಾಗ-ಮಧುಕೌಂಸ ಸಂಪನ್ನಗೊಂಡಿತು. ಖ್ಯಾತ ಕಲಾವಿದರಾದ ಕುಮಾರ ಮರ್ಡೂರ, ಧಾರವಾಡ ಇವರು ರಾಗ– ಜೈಜೈವಂತಿಯನ್ನು ಬಹಳ ಆತ್ಮೀಯತೆಯೊಂದಿಗೆ ಪ್ರಾರಂಭಿಸಿ ನೆರೆದ ರಾಗ ರಸಿಕರ ಮನಸೂರೆಗೊಂಡರಲ್ಲದೇ, ರಾಗ– ಮಿಶ್ರ ಪಹಾಡಿಯನ್ನು ಪ್ರಸ್ತುತ ಪಡಿಸಿದರು. ಅಮೋಘವಾಗಿ ಮೆರಗು ಪಡೆದ ತಡರಾತ್ರಿಯ ನಾದಸಿರಿಯಲ್ಲಿ ಗುರುಪ್ರಸಾದ ಹೆಗಡೆ ಗಿಳಿಗುಂಡಿ ಮತ್ತು ಮೋಹ್ಸಿನ್ ಖಾನ್‌ರವರ ಸಾರಂಗೀ- ಸಿತಾರ್ ಜುಗಲ್ಬಂದಿಯಲ್ಲಿ ರಾಗ– ಜಿಂಝೋಟಿಯ ವಾದನವು ಜನರ ಮೆಚ್ಚುಗೆಗೆ ಪಾತ್ರವಾಯಿತು.
  ಕಾರ್ಯಕ್ರಮದ ಕೊನೆಯ ಪ್ರಸ್ತುತಿಯಾಗಿ ವಿನಾಯಕ ಹೆಗಡೆ ಮುತ್ಮುರ್ಡು ಅವರ ಗಾಯನದಲ್ಲಿ ರಾಗ– ‘ತೋಡಿ’ ಹಾಗೂ ‘ಸೂರಮಲ್ಹಾರ’ ಸಂಗೀತ ವೈಭವವು ‘ಭೈರವಿ’ಯ ಗಾಯನದೊಂದಿಗೆ ‘ನಾದಸಿರಿ-2023’ ರಾಗಸಂಗೀತೋತ್ಸವದ ಯಶಸ್ಸಿನಲ್ಲಿ ಸಂಪನ್ನಗೊಂಡಿತು. ಸಹ ಕಲಾವಿದರಾಗಿ ತಬಲಾದಲ್ಲಿ ಡಾ.ಉದಯ ಕುಲಕರ್ಣಿ, ಶಂತನು ಶುಕ್ಲಾ, ಶ್ರೀಧರ ಮಾಂಡ್ರೆ, ಗುರುಪ್ರಸಾದ್ ಹೆಗಡೆ, ಭರತ ಹೆಗಡೆ, ದಿನೇಶ ಹೆಗಡೆ ಇವರು ಸಂವಾದಿನಿಯಲ್ಲೂ ಸಮರ್ಥವಾಗಿ ಸಾಥ ನೀಡಿದರು. ವಸುಧಾ ಹೆಗಡೆ ಇವರು ಕಾರ್ಯಕ್ರಮದ ನಿರೂಪಕಿಯಾಗಿ ಸಂಪೂರ್ಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಟ್ರಸ್ಟಿನ ಅಧ್ಯಕ್ಷ ರಾಜಾರಾಮ ಹೆಗಡೆಯವರು ‘ಸ್ವರ ಸಂವೇದನಾ ಪ್ರತಿಷ್ಠಾನ’ ಗಿಳಿಗುಂಡಿಯ ವತಿಯಿಂದ ವಂದನಾರ್ಪಣೆಗೈದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top