Slide
Slide
Slide
previous arrow
next arrow

ಪ್ರಕೃತಿ ವಿಕೋಪ ಪೂರ್ವಭಾವಿ ಸಭೆ ನಡೆಸಿದ ತಹಶೀಲ್ದಾರ

300x250 AD

ಯಲ್ಲಾಪುರ: ತಹಶೀಲ್ದಾರ ಎಂ.ಗುರುರಾಜ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರಕೃತಿ ವಿಕೋಪ ಮುಂಜಾಗೃತಾ ಕ್ರಮಗಳ ಕುರಿತು ಪೂರ್ವಭಾವಿ ಸಭೆ ನಡೆಯಿತು.
ನಂತರ ಮಾತನಾಡಿದ ಅವರು, ಮುಂಗಾರಿನ ಅಕಾಲಿಕ ಮಳೆ ಈಗಾಗಲೇ ಪ್ರಾರಂಭವಾಗಿದೆ. ಪ್ರಕೃತಿ ವಿಕೋಪದಿಂದಾಗಿ ಸಮಸ್ಯೆಗಳು ಉದ್ಭವವಾಗದಂತೆ ಮುಂಜಾಗೃತಾ ಹಾಗೂ ರಕ್ಷಣಾ ಕ್ರಮಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಹಿಂದಿನ ಪ್ರಾಕೃತಿಕ ವಿಕೋಪಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಮುಂಗಾರು ಹಾಗೂ ಅತಿವೃಷ್ಠಿಯ ಕುರಿತು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಾಗಿರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಎದುರಿಸಲು ತಾಲೂಕಿನ 15 ಗ್ರಾಮ ಪಂಚಾಯತ ಹಾಗೂ ಯಲ್ಲಾಪುರ ಪಟ್ಟಣ ಪಂಚಾಯತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಯಿತು. ಮಳೆಗಾಲ ಮುಗಿಯುವರೆಗೆ ಅಧಿಕಾರಿಗಳು ಮೇಲಾಧಿಕಾರಿಗಳ ಅನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಲಾಯಿತು.
ತಾಲೂಕಿನ ಕಿರವತ್ತಿ ಮತ್ತು ಮದನೂರು ಭಾಗಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ ತಾಲೂಕಿನ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಕೊರತೆಯಾಗದಂತೆ ಕ್ರಮ ವಹಿಸುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಲಾಯಿತು. ದನಕರುಗಳಿಗೆ ಸಾಂಕ್ರಾಮಿಕ ರೋಗಗಳು ತಗುಲದಂತೆ ಮುನ್ನೆಚ್ಚರಿಕೆಯ ಲಸಿಕೆಗಳನ್ನು ಹಾಕಿಸಲು ಮತ್ತು ಈ ಕುರಿತು ಅವಶ್ಯಕ ಲಸಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿರಿಸಿಕೊಳ್ಳಲು ಸಹಾಯಕ ಪಶುಸಂಗೋಪನಾ ನಿರ್ದೇಶಕರಿಗೆ ಸೂಚಿಸಲಾಯಿತು.
ಮಳೆಗಾಲದಲ್ಲಿ ಜನರಿಗೆ ಡೆಂಗು, ಚಿಕೂನ್ ಗುನ್ಯಾ ಮುಂತಾದ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು, ಪ್ರಸ್ತುತ ವರ್ಷದ ಮಳೆಗಾಲದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕ ಔಷಧಗಳನ್ನು ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಿಟ್ಟುಕೊಳ್ಳಲು ಹಾಗೂ ರೋಗಗಳ ಮುನ್ನೆಚ್ಚರಿಕೆ ಕ್ರಮಗಳ ವ್ಯಾಪಕ ಪ್ರಚಾರ ಮಾಡುವಂತೆ ಸೂಚಿಸಲಾಯಿತು.
ಪಟ್ಟಣ ಪಂಚಾಯತ ವ್ಯಾಪ್ತಿಯ ರಸ್ತೆ ಮೇಲೆ ನೀರು ತುಂಬಿ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಚರಂಡಿ ಸ್ವಚ್ಛತೆ ಮಾಡುವಂತೆ ಈ ಕುರಿತು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯಿಂದ ಪಂಚಾಯತ ರಸ್ತೆಗಳ ಚರಂಡಿಗಳಲ್ಲಿ ಹೂಳು ತುಂಬಿದಕಡೆ ಕೂಡಲೇ ಚರಂಡಿಗಳನ್ನು ಸ್ವಚ್ಚಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು.
ರಸ್ತೆ ಹಾಗೂ ವಿದ್ಯುತ್ ಕಂಬದ ಮೇಲೆ ಮರ ಉರುಳಿ ಬೀಳದಂತೆ ಕ್ರಮ ವಹಿಸುವಂತೆ, ಪ್ರವಾಹ ಸಂರಕ್ಷಣಾ ಕೆಲಸಕ್ಕೆ ಅನುಕೂಲವಾಗುವಂತೆ ಫ್ಲಡ್‌ಲೈಟ್‌ಗಳನ್ನು ಹಾಗೂ ಬ್ಯಾಟರಿಗಳನ್ನು ಇಟ್ಟುಕೊಳ್ಳುವಂತೆ ಹೆಸ್ಕಾಂ, ಅರಣ್ಯ ಇಲಾಖೆ, ಪಟ್ಟಣ ಪಂಚಾಯತ,ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಸೂಚಿಸಲಾಯಿತು. ಅಗ್ನಿಶಾಮಕ ಇಲಾಖೆಯವರು ಅಗತ್ಯ ಅವಶ್ಯಕ ರಕ್ಷಣಾ ಪಲಕರಗಳೊಂದಿಗೆ ಸನ್ನದ್ದಾರಾಗಿರುವಂತೆ ಸೂಚಿಸಲಾಯಿತು.
ತುರ್ತು ಸಂಪರ್ಕಕ್ಕಾಗಿ ಮತ್ತು ಮಾಹಿತಿಗಾಗಿ ತಾಲೂಕಿನಲ್ಲಿ ಎರಡು ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಮೊ.ಸಂ: 99025 71927, ದೂ.ಸಂ: 08419-261152ಗೆ ಸಂಪರ್ಕಿಸಿ ಮಾಹಿತಿಗಳನ್ನು ನೀಡಬಹುದು. ಗ್ರಾಮ ಪಂಚಾಯತಿವಾರು ಮೊಬೈಲ್ ನೆಟ್‌ವರ್ಕ್ ಸಂಪರ್ಕಕ್ಕೆ ಸಿಗದೇ ಇರುವ ಗ್ರಾಮ, ಮಜರೆಗಳ ಪಟ್ಟಿ ಮಾಡಿ ಈ ಗ್ರಾಮಗಳನ್ನು ಸಂಪರ್ಕಿಸಲು ರನ್ನರ್ ಅಥವಾ ಸ್ಥಳೀಯರನ್ನು ಗುರುತಿಸಿಟ್ಟುಕೊಂಡು ಸದರಿಯವರಿಗೆ ಈ ಕುರಿತು ಗ್ರಾಮ ಪಂಚಾಯತಿ ಹಂತದಲ್ಲಿ ಮಾಹಿತಿ ನೀಡುವಂತೆ ಸೂಚಿಸಲಾಯಿತು.
ಜೆಸಿಬಿ, ಟ್ರಕ್, ಟ್ರಾಕ್ಟರ್, ದೋಣಿ, ಲೈಪಜಾಕೆಟ್, ಯಾಂತ್ರಿಕೃತ ಗರಗಸ, ವಾಹನಗಳು, ಸ್ಥಳೀಯ ವಿಶಾಲ ಕಟ್ಟಡಗಳ ಮಾಹಿತಿ, ಹಾಗೂ ಮಾಲಕರ ಮತ್ತು ಚಾಲಕರ ದೂರವಾಣಿ ನಂಬರಗಳ ಮಾಹಿತಿಯನ್ನು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಪಟ್ಟಿ ಮಾಡಿ, ಸದರಿಯವರಿಗೆ ಮಳೆಗಾಲದಲ್ಲಿ ಅನಾಹುತಗಳಾದಲ್ಲಿ ಕೂಡಲೇ ಕರ್ತವ್ಯಕ್ಕೆ ಬರುವಂತೆ ಅಧಿಕೃತವಾಗಿ ಆದೇಶವನ್ನು ನೀಡಬೇಕು ಎಂದು ಸೂಚಿಸಲಾಯಿತು.
ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ವಲಯ ಅರಣ್ಯ ಅಧಿಕಾರಿಗಳಾದ ಅಮಿತ್ ಚೌಹಾನ್ ಮಂಚಿಕೇರಿ, ದಿನೇಶ್ ಮಿರ್ಜಾನಕರ್ ಕಿರವತ್ತಿ, ಶಿಲ್ಪಾ ನಾಯ್ಕ ಇಡಗುಂದಿ, ಎಲ್ ಎ ಮಠ ಯಲ್ಲಾಪುರ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀರಾಮ ಹೆಗಡೆ, ಝಡ್ ಪಿ ಜೆಇ ಮೀನಾಕ್ಷಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಯ್ಯ ಹಿರೇಮಠ, ತೋಟಗಾರಿಕೆ ಇಲಾಖೆಯ ಸುಭಾಸ ಹೆಗಡೆ ಇನ್ನು ಮುಂತಾದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top