• Slide
  Slide
  Slide
  previous arrow
  next arrow
 • ಶಾಸಕ ದಿನಕರ ಶೆಟ್ಟಿಗೆ ನಾಡವರಿಂದ ಅಭಿನಂದನೆ

  300x250 AD

  ಗೋಕರ್ಣ: ಮೂರನೇ ಬಾರಿಗೆ ಕುಮಟಾ- ಹೊನ್ನಾವರ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿ ಅವರಿಗೆ ನಾಡವರ ಸಮಾಜ ಬಾಂಧವರು ಅಭಿನಂದನಾ ಸಮಾರಂಭ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ತೊರ್ಕೆಯ ನಾಡವರ ಸಮುದಾಯ ಭವನದಲ್ಲಿ ನಡೆಯಿತು.
  ತೊರ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಆನಂದು ಕವರಿ ಮಾತನಾಡಿ, ಶಾಸಕ ದಿನಕರ ಶೆಟ್ಟಿಯವರು ನಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು, ಅವರ ಜನಪ್ರಿಯ ಯೋಜನೆಯಿಂದಾಗಿಯೇ ಅವರು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಜನಪರ ಯೋಜನೆಗಳನ್ನು ಕಾಣಲು ಸಾಧ್ಯವಿದೆ ಎಂದರು.
  ಗೌರವ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಯಾವುದೇ ಜಾತಿ ಧರ್ಮಗಳನ್ನು ನೋಡದೇ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ನನಗೆ ಇನ್ನಷ್ಟು ಹೆಚ್ಚಿನ ಮತಗಳ ನಿರೀಕ್ಷೆಯಿತ್ತು. ಆದರೂ ಕೂಡ ನನ್ನ ಗೆಲುವು ಅಭಿವೃದ್ಧಿಪರ ಎನ್ನುವುದು ಇದರಿಂದ ಸಾಧ್ಯವಾಗಿದೆ ಎಂದರು.
  ಈ ಸಂದರ್ಭದಲ್ಲಿ ನಾಡವರ ಸಮಾಜದ ಪ್ರಮುಖರಾದ ಪ್ರದೀಪ ನಾಯಕ ದೇವರಬಾವಿ, ಆಶ್ರಯ ಫೌಂಡೇಶನ್ ಗೌರವಾಧ್ಯಕ್ಷ ರಾಜೀವ ಗಾಂವಕರ, ಗೋಕರ್ಣ ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ ನಾಯಕ ತೊರ್ಕೆ, ಗ್ರಾ.ಪಂ.ಸದಸ್ಯರಾದ ಮಂಜುನಾಥ ನಾಯಕ, ಮಹೇಶ ನಾಯಕ ದೇವರಬಾವಿ, ಮಾಜಿ ಸದಸ್ಯ ಗಣಪತಿ ನಾಯಕ ಮಳಲಿ, ನಾಡುಮಾಸ್ಕೇರಿ ಸದಸ್ಯ ರಾಜೇಶ ನಾಯಕ, ತಾ.ಪಂ. ಮಾಜಿ ಸದಸ್ಯ ವೆಂಕಟರಮಣ ಕವರಿ, ಯುವಕ ಸಂಘದ ಅಧ್ಯಕ್ಷ ದರ್ಶನ ಕವರಿ, ಜಿಲ್ಲಾ ಬಿಜೆಪಿ ಸದಸ್ಯ ರಮೇಶ ಪಂಡಿತ ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top