ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ
ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 56ನೇ ವರ್ಧಂತ್ಯುತ್ಸವ ವೈದಿಕ ಕಾರ್ಯಕ್ರಮ ಹಾಗು ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣೆಯೊಂದಿಗೆ ನಡೆಯಿತು.
ಶ್ರೀ ಗಣಪತಿ ಅಥರ್ವಶೀರ್ಷ ಹವನ, ಮೃತ್ಯುಂಜಯ ಹವನ, ಆಯುಷ್ಯಚರು ಹವನ, ಶ್ರೀಸೂಕ್ತ ಪುರುಷಸೂಕ್ತ ಹವನ ನಡೆಯಿತು. ವೇ.ಮೂ. ಪ್ರಭಾಕರ ಉಪಾದ್ಯರು ಗೋಕರ್ಣ, ನರಸಿಂಹ ಜೋಷಿ ಬಾಡಲಕೊಪ್ಪ, ಬಾಲಚಂದ್ರ ಶಾಸ್ತ್ರೀ, ಕೃಷ್ಣ ಜೋಷಿ ಮೂಲೇಮನೆ ಇನ್ನೂ ಅನೇಕ ವೈದಿಕರು ಭಾಗವಹಿಸಿದ್ದರು. ಗ್ರಾಮಾಭ್ಯುದಯ ಸಂಸ್ಥೆ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 30 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. 60 ಕ್ಕೂ ಜನ ಉಚಿತ ತಪಾಸಣೆ ಪ್ರಯೋಜನ ಪಡೆದುಕೊಂಡಿದ್ದು ಅವರಿಗೆ ಉಚಿತ ಔಷಧಿ ವಿತರಣೆ ನಡೆಯಿತು. ಟಿ. ಎಸ್. ಎಸ್. ಆಸ್ಪತ್ರೆಯ ವೈದ್ಯರುಗಳಾದ ಡಾ| ಸುಮನ್, ಡಾ| ಪಿ.ಎಸ್. ಹೆಗಡೆ, ಡಾ| ಸ್ವಾತಿ ನಾಡಿಗೇರ, ಡಾ| ಪ್ರಶಾಂತ ಎಸ್. ಪಾಟೀಲ್ ಡಾ| ಆಶಿಶ್ ವಿ. ಜನ್ನು ಹಾಗೂ ಸಿಬ್ಬಂದಿಗಳು, ಮತ್ತು ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಸಹಕಾರದಲ್ಲಿ ರಕ್ತದಾನ ಹಾಗೂ ಉಚಿತ ತಪಾಸಣೆ ಶಿಬಿರವು ಯಶಸ್ವಿಯಾಗಿ ನೇರವೇರಿತು.
ಈ ಕಾರ್ಯಕ್ರಮದಲ್ಲಿ ಗ್ರಾಮಾಭ್ಯುದಯ ಕಾರ್ಯದರ್ಶಿ ಸಂತೋಷ ಭಟ್ ಕೋಡಿಗಾರ, ಸದಸ್ಯರಾದ ಗುರುಪಾದ ಹೆಗಡೆ ಎಲ್ಲೆಕೊಪ್ಪ, ಶ್ರೀಧರ ಭಟ್ ಕಳವೆ, ರವಿ ದೇವ ಬೆಳಲೆ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಕೃಷಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ರಮೇಶ ಹೆಗಡೆ ದೊಡ್ನಳ್ಳಿ ಇತರರು ಶಿಬಿರಕ್ಕೆ ಸಹಕಾರ ನೀಡಿದರು.