ಜಮ್ಮು: 1990 ರಿಂದ, ಮೊದಲ ಬಾರಿಗೆ 40,000 ಕ್ಕೂ ಹೆಚ್ಚು ಕಾಶ್ಮೀರಿ ಹಿಂದೂಗಳು ನಿನ್ನೆ ಅಷ್ಟಮಿಯಂದು ಕಾಶ್ಮೀರದಲ್ಲಿ ಖೀರ್ ಭವಾನಿ ಮೇಳವನ್ನು ಆಚರಿಸಿದ್ದಾರೆ. ನೂರಾರು ಕಾಶ್ಮೀರಿ ಪಂಡಿತರು ಭಾನುವಾರ ಕಣಿವೆಯ ಗಂದರ್‌ಬಾಲ್ ಜಿಲ್ಲೆಯ ಪ್ರಸಿದ್ಧ ರಾಗ್ನ್ಯಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು ಮತ್ತು ವಾರ್ಷಿಕ ಖೀರ್ ಭವಾನಿ ಮೇಳವನ್ನು ಆಚರಿಸಿದರು. ಮಧ್ಯ ಕಾಶ್ಮೀರ ಜಿಲ್ಲೆಯಲ್ಲಿ ಬೃಹತ್ ಚಿನಾರ್ ಮರಗಳ ನೆರಳಿನಲ್ಲಿ ನೆಲೆಸಿರುವ ಈ ದೇವಾಲಯವು ಅಪಾರ ಸಂಖ್ಯೆಯ ಭಕ್ತರನ್ನು ಸೆಳೆದಿದೆ, ಅವರಲ್ಲಿ ಹೆಚ್ಚಿನವರು ಕಾಶ್ಮೀರಿ ಪಂಡಿತರು, ದೇಶಾದ್ಯಂತದಿಂದ ಪ್ರಯಾಣ ಮಾಡಿ ಇಲ್ಲಿಗೆ ಆಗಮಿಸಿದ್ದಾರೆ.
ಬರಿಗಾಲಿನಲ್ಲಿ ಭಕ್ತರು ನಡೆದು ದೇವಿ ದರ್ಶನ ಪಡೆದುಕೊಂಡಿದ್ದಾರೆ. ದೇಗುಲದ ಸಮೀಪವಿರುವ ಹೊಳೆಯಲ್ಲಿ ಪುರುಷರು ಸ್ನಾನ ಮಾಡಿದ್ದಾರೆ ಮತ್ತು ಗುಲಾಬಿ ದಳಗಳನ್ನು ಹಿಡಿದು ದೇವಿಗೆ ಹರಕೆ ಸಲ್ಲಿಸಿದ್ದಾರೆ. ಪವಿತ್ರ ಬುಗ್ಗೆಯಲ್ಲಿ ಹಾಲು ಮತ್ತು ಖೀರ್ (ಅಕ್ಕಿ ಕಡುಬು) ಅರ್ಪಿಸಿ ದೇವರಿಗೆ ನಮನ ಸಲ್ಲಿಸಿದ್ದಾರೆ.
ಕೋಮು ಸೌಹಾರ್ದತೆಯ ಪ್ರತೀಕವಾದ ಮೇಳವು ಭಕ್ತರಿಗೆ ಭದ್ರತೆ ಸೇರಿದಂತೆ ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡಿದ್ದರಿಂದ ಶಾಂತಿಯುತವಾಗಿ ಜರುಗಿತು.ದೇವಿಯ ಜನ್ಮದಿನದಂದು ನಡೆಯುವ ವಾರ್ಷಿಕ ಮೇಳದ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡದೆ ಅವರ ಪೂಜೆ ಅಪೂರ್ಣವಾಗಿದೆ ಎಂದು ಜಮ್ಮುವಿನ ಭಕ್ತರು ನಂಬುತ್ತಾರೆ.