• Slide
  Slide
  Slide
  previous arrow
  next arrow
 • ನಗರ ಮಂಡಲ ಬಿಜೆಪಿ ವತಿಯಿಂದ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ

  300x250 AD

  ಶಿರಸಿ: ನಗರದ ಪಂ.ದೀನ ದಯಾಳ ಭವನದಲ್ಲಿ ಮೇ.29ರಂದು ಶಿರಸಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರಿಗೆ,‌ಮತದಾರರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಗೆ ಆಗಮಿಸಿದ ಎಲ್ಲರನ್ನೂ ನಗರ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ ತಿರುಮಲೆ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ರಾಜೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಸಂಘಟನೆ ಸದೃಡಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪೃವ್ರತ್ತರಾಗುವಂತೆ ಕರೆ ನೀಡಿದರು.


  ಪ್ರಮುಖರಾದ ನಂದನ ಸಾಗರ ಮತ್ತು ಗಣಪತಿ ನಾಯ್ಕ ಮಾತನಾಡಿದರು.
  ಭಾಜಪಾ ಶಿರಸಿ ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ, ಕಾರ್ಯಕರ್ತರಿಗೆ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತ ಈ ಬಾರಿ ಜೆಡಿಎಸ್ ಪಕ್ಷದ ಹೀನಾಯ ಸೋಲಿನಿಂದ ನಮಗೆ ಮತಗಳಿಕೆಯಲ್ಲಿ ಹಿನ್ನಡೆ ಉಂಟಾಯಿತು ಎಂದರು. ಆದರೂ ಶಿರಸಿ ಸಿದ್ದಾಪುರದ ಕ್ಷೇತ್ರದ ಜನತೆ ಬಿಜೆಪಿಯನ್ನು ಅಭೂತಪೂರ್ವವಾಗಿ ಬೆಂಬಲಿಸಿರುವುದು ಕಂಡು ಬಂದಿರುವ ಬಗ್ಗೆ ವಿಶ್ಲೇಸಿದರು. ನಗರದ ಅನೇಕ ಬೂತ್ ಗಳಲ್ಲಿ ಮತ ಏರಿಕೆಯಾಗಿರುವುದು ಕಂಡು ಬಂದಿದೆ ಎಂದರು. ಹಾಗಾಗಿ ಜನರ ಒಲವು ಇನ್ನೂ ಬಿಜೆಪಿ ಕಡೆಯಿದೆ ಎಂದರು. ಪ್ರಾರಂಭದಲ್ಲಿ ನಿನ್ನೆ ನಡೆದ ನೂತನ ಪಾರ್ಲಿಮೆಂಟ್ ಉದ್ಘಾಟಿಸಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಈ ಸಂದರ್ಭದಲ್ಲಿ ಕಾಗೇರಿ ಅಭಿನಂದಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top