• Slide
    Slide
    Slide
    previous arrow
    next arrow
  • ಆದಿಚುಂಚನಗಿರಿ ಮಠಕ್ಕೆ ಮಂಕಾಳ ವೈದ್ಯ ಭೇಟಿ

    300x250 AD

    ಹೊನ್ನಾವರ: ರಾಜ್ಯದ ನೂತನವಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಮಂಕಾಳ ಎಸ್.ವೈದ್ಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದರು.

    ಬೆಂಗಳೂರಿನಲ್ಲಿ ಸಚೀವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಹಾಗೂ  ಕ್ಷೇತ್ರಾದಿ ದೇವತೆಗಳ ದರ್ಶನ ಪಡೆದು ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

    ನಂತರ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಹಾಗೂ ಪ್ರಸನ್ನನಾಥ ಸ್ವಾಮೀಜಿರವರಿಂದ ಆಶೀರ್ವಾದ ಪಡೆದರು. ಈ ವೇಳೆ ಪತ್ನಿ ಪುಷ್ಪಲತಾ, ಪುತ್ರಿ ಬೀನಾ ವೈದ್ಯ, ಒಕ್ಕಲಿಗ ಸಮಾಜದ ತಾಲೂಕ ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top