• Slide
    Slide
    Slide
    previous arrow
    next arrow
  • ಐಗಳಕುರ್ವೆ ಸೇತುವೆ ಪೂರ್ಣಗೊಳಿಸುವ ಭರವಸೆ ನೀಡಿದ ಆಳ್ವಾ

    300x250 AD

    ಕುಮಟಾ: ತಾಲೂಕಿನ ಐಗಳಕುರ್ವೆಯಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಪೂರ್ಣಗೊಂಡ ಸೇತುವೆಯನ್ನು ಅತೀ ಶೀಘ್ರ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಅನುವು ಮಾಡಿಕೊಡುವ ದಿಶೆಯಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವದಾಗಿ ಕಾಂಗ್ರೆಸ್ಸಿನ ಮುಖಂಡ ನಿವೇದಿತ ಅಳ್ವಾ ಸ್ಥಳೀಯರಿಗೆ ಭರವಸೆ ನೀಡಿದರು.

    ತನ್ನ ಚುನಾವಣಾ ಪ್ರಚಾರದ ವೇಳೆ ನಾಗರಿಕರಿಂದ ಹಲವು ದೂರುಗಳನ್ನು ಸ್ವೀಕರಿಸಿದ್ದ ಅವರು ಅಂದು ಚುನಾವಣೆಯ ನಂತರ ಮತ್ತೆ ಬಂದು ಕೆಲಸ ಪೂರ್ಣಗೊಳಿಸಿ ಕೊಡುವ ಭರವಸೆ ನೀಡಿದಂತೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. 2018ರಲ್ಲಿ ಕಾಂಗ್ರೆಸ್ ಸರಕಾರ ಮಂಜೂರು ಮಾಡಿದ ಸದರಿ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ ಎನ್ನುವುದನ್ನು  ಸ್ಮರಿಸಬಹುದು.

    300x250 AD

    ಈ ಸಂದರ್ಭದಲ್ಲಿ ಬಿಸಿಸಿ ಅಧ್ಯಕ್ಷ ಹೊನಪ್ಪ ನಾಯಕ್, ಭಾರತಿ ಪಟಗಾರ, ಮಹಿಳಾ ಬಿಸಿಸಿ ಅಧ್ಯಕ್ಷರು, ಕುಮಟಾ, ಎಂ ಟಿ ನಾಯ್ಕ, ಭುವನ ಭಾಗವತ, ನಾಗರಾಜ ಹಿತ್ತಲಮಕ್ಕಿ, ಸಚಿನ್ ನಾಯ್ಕ್, ರವಿ ಶೆಟ್ಟಿ ಕವಲಕ್ಕಿ, ಸತೀಶ್ ಪಿ ನಾಯ್ಕ್, ಉತ್ತರ ಕನ್ನಡ ಒಬಿಸಿ ಅಧ್ಯಕ್ಷ ಆರ್ ಹೆಚ್ ನಾಯ್ಕ್, ನಾಗರಾಜ ಮಡಿವಾಳ, ನಾಗರಾಜ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top