Slide
Slide
Slide
previous arrow
next arrow

ಬೆಂಕಿ ಅವಘಡ: ಸುಟ್ಟು ಕರಕಲಾದ ಫೋಟೊ ಸ್ಟುಡಿಯೋ

300x250 AD

ಅಂಕೋಲಾ: ಇಲ್ಲಿನ ಅಂಕೋಲಾ ಅರ್ಬನ್ ಬ್ಯಾಂಕ್ ಎದುರಿನ ಕಟ್ಟಡದ ಮೇಲ್ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಫೋಟೊ ಸ್ಟುಡಿಯೋ ಶೆಲ್ಟರ್ ಬಳಿಯಿಂದ  ಸಣ್ಣ ಪ್ರಮಾಣದಲ್ಲಿ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ದಾರಿಹೋಕರು ಈ ವಿಷಯವನ್ನು  ಅಗ್ನಿಶಾಮಕ ಠಾಣೆ ಹಾಗೂ ಸ್ಟುಡಿಯೋ ಮಾಲಕರಿಗೆ ಫೋನ್ ಕರೆ ಮಾಡಿ ತಿಳಿಸಿದ್ದು, ಕೆಲ ಹೊತ್ತಿನಲ್ಲೇ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆಗೆ ಇಳಿದಿದ್ದಾರೆ.

ತಾಲೂಕಿನ ಅಗ್ರಗೋಣ ಮೂಲದ ಸಂತೋಷ ಅಶೋಕ ಸಾಮಂತ ಎಂಬುವವರಿಗೆ ಸೇರಿದ ಫೋಟೋ ಸ್ಟುಡಿಯೋ ಬೆಂಕಿಗೆ ಆಹುತಿಯಾಗಿದ್ದು, ನೆಮ್ಮದಿಯಿಂದ ಕೂಡಿದ ಜೀವನಕ್ಕೂ ಬೆಂಕಿ ಬಿದ್ದಂತಾಗಿದೆ. ಇಕ್ಕಟ್ಟಾದ ಮೆಟ್ಟಿಲು ದಾರಿ, ಸ್ಟುಡಿಯೋ ಒಳಗಿನ ಬೆಂಕಿಯ ತೀವ್ರತೆ, ಸುರಿದ ಭಾರೀ ಮಳೆಯ ಕಾರಣಗಳಿಂದ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗಿ,ಆ ವೇಳೆಗಾಗಲೇ ಸ್ಟುಡಿಯೋದಲ್ಲಿದ್ದ ಪರಿಕರಗಳು, ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದೆ.

ತಾಲೂಕಾ ಪೋಟೋಗ್ರಾಫರ್ಸ್ ಯೂನಿಯನ್ ಪ್ರಮುಖರಾದ ಶ್ರೀನಿವಾಸ – ಸಿರಿ, ನಿತಿನ್ ನಾಯ್ಕ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ,ಸಾಮಾಜಿಕ ಕಾರ್ಯಕರ್ತ ಸಂಜಯ ಮೋದಿ ಮತ್ತಿತರ ಸ್ಥಳೀಯ ಪ್ರಮುಖರು ಹಾಗೂ ಸಂತೋಷ ಇವರ ಆತ್ಮೀಯರು, ಕುಟುಂಬದ ಹಿತೈಷಿಗಳು ಘಟನೆ ಕುರಿತು ಬೇಸರ ವ್ಯಕ್ತಪಡಿಸಿ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ

300x250 AD

ಅದೇ ಕಟ್ಟಡದ ಮೇಲ್ಮಹಡಿಯಲ್ಲಿ ಅಡುಗೆ ಅನಿಲ ಸಿಲೆಂಡರ್ ಇದ್ದು, ಸ್ಥಳೀಯ ಯುವಕರು ಕಟ್ಟಡದ ತಾರಸಿ ಏರಿ, ಹೊಗೆಯಿಂದ ಉಸಿರುಗಟ್ಟುವ ಅಪಾಯಕಾರಿ ಪರಿಸ್ಥಿತಿಯ ನಡುವೆಯೂ ಧೈರ್ಯಗುಂದದೆ, ಒಳ ಹೊಕ್ಕು ಸಿಲಿಂಡರನ್ನು ಹೊರ ತಂದು ಸಂಭವನೀಯ ಭಾರೀ ಅನಾಹುತ ತಪ್ಪಿಸಿದ್ದು , ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿದ್ಯುತ್ ಶಾರ್ಟ ಸರ್ಕೀಟ್ ನಿಂದಲೇ ಈ ಬೆಂಕಿ ಅವಘಡ ಸಂಭವಿಸಿದೆಯೇ ಅಥವಾ ಆಂತರಿಕ ಇತರ ಕಾರಣಗಳಿಂದಲೋ  ಎಂಬ ವಿಷಯದ  ಸ್ಥಳೀಯರ ಚರ್ಚೆಗೆ ಕಾರಣವಾದಂತಿದ್ದು, ಹೆಸ್ಕಾಂ ವಿಭಾಗದ ಗಜವದನ ಮತ್ತಿತರ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದ್ದಾರೆ.

Share This
300x250 AD
300x250 AD
300x250 AD
Back to top