ಯಲ್ಲಾಪುರ: ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಪ್ರಥಮ ವರ್ಷದ ವಾರ್ಷಿಕ ವರ್ಧತಿ ಉತ್ಸವ ಮೇ.29 ರಂದು ನಡೆಯಲಿದೆ.
ಅಂದು ದೇವಸ್ಥಾನದಲ್ಲಿ ಪುಣ್ಯಾಹವಾಚನ, ಕಲಶ ಪೂಜೆ. ಪ್ರಾಣ ಪ್ರತಿಷ್ಠಾಪನೆ. ಗಣಹವನ ಶ್ರೀ ದೇವರಿಗೆ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಹೂ ಅಲಂಕಾರ ಹಾಗೂ ಕುಂಕುಮಾರ್ಚನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆಯ ನಂತರ 1 ಘಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ.
ಕೆಎಸ್‌ಆರ್‌ಟಿಸಿ ಘಟಕದ ಸಿಬ್ಬಂದಿಗಳು, ಎಲ್ಲ ಭಕ್ತಾದಿಗಳು ಪರಿವಾರ ಸಮೇತರಾಗಿ ವಾರ್ಷಿಕ ವರ್ಧತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ. ಶ್ರೀ ವಿಘ್ನೇಶ್ವರ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಅರ್ಚಕರು ಪ್ರಸಾದ ಭಟ್ ಹಾಗೂ ಘಟಕ(ಡಿಫೊ)ದ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾಗಣಪತಿ ದೇವಸ್ಥಾನದಲ್ಲಿ ಪ್ರಥಮ ವಾರ್ಷಿಕ ವರ್ಧಂತಿ
