• Slide
  Slide
  Slide
  previous arrow
  next arrow
 • ವಡ್ಡಿನಕೊಪ್ಪದಲ್ಲಿ ಗಾನ ಸಿರಿ: ಉಸ್ತಾದ್ ಫಯಾಜ್ ಗಾನಕ್ಕೆ ತಲೆದೂಗಿದ ಸಂಗೀತಾಭಿಮಾನಿಗಳು

  300x250 AD

  ಶಿರಸಿ : ತಾಲೂಕಿನ ಬೆಂಗಳೆ ವಡ್ಡಿನಕೊಪ್ಪದ ಸುತ್ತಲೂ ಇರುವ ಹಸಿರಿನ ಸಿರಿಯ ನಡುವೆ ಸಂಘಟಿಸಿದ್ದ ಅಂತಾರಾಷ್ಟ್ರೀಯ ಗಾಯನ ಖ್ಯಾತಿಯ ಕರ್ನಾಟಕ ನೃತ್ಯ ಮತ್ತು ಸಂಗೀತ ಅಕಾಡೆಮಿಯ ಮಾಜಿ ಅಧ್ಯಕ್ಷ ಉಸ್ತಾದ ಫಯಾಜ್ ಖಾನ್ ಅವರ ಗಾನ, ಸಂಗೀತಾಭಿಮಾನಿಗಳ ಮನಸೂರೆಗೊಳ್ಳಲು ಯಶಸ್ವಿಯಾಯಿತು.

  ಉಸ್ತಾದ ಫಯಾಜ್ ಆರಂಭಿಕವಾಗಿ ರಾಗ್ ರಾಗೇಶ್ರೀ ಅನ್ನು ವಿಸ್ತಾರವಾಗಿ ಹಾಡಿ ಅದರ ಚೀಜ್ ಗಳ ಭಾವನೆಯನ್ನು ಹಾಡಿದರು. ನಂತರ ದಾಸರ ಪದ ಸುಗಮ ಸಂಗೀತಗಳನ್ನು ವೈವಿಧ್ಯಮಯವಾಗಿ ಹಾಡುತ್ತಾ, ಮೊದಲ ಲಾಕ್ ಡೌನ್ ಹಂತದಲ್ಲಿ ತಾವೇ ಸಂಯೋಜಿಸಿದ ಕೆಲವು ಅಪರೂಪದ ಹಾಡುಗಳನ್ನು ಹಾಡಿ ಸೇರಿದ್ದ ಅಪಾದ ಸಂಗೀತಾಸಕ್ತರ ಮನಗೆದ್ದರು. ಉಸ್ತಾದ್ ಫಯಾಜ್ ಅವರ ಗಾನಕ್ಕೆ ಸಾರಂಗಿವಾದನಲ್ಲಿ ಸರ್ಫರಾಜ್ ಖಾನ್, ತಬಲಾದಲ್ಲಿ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಮತ್ತು ಹಿನ್ನೆಯ ಸಹಗಾನದಲ್ಲಿ ಯುವ ಗಾಯಕ ಭಾರ್ಗವ ಕುಲ್ಕರ್ಣಿ ಬೆಂಗಳೂರು ಸಮರ್ಥವಾಗಿ ಸಾಥ್ ನೀಡಿದರು. ತಾಳದಲ್ಲಿ ಅನಂತ ಹೆಗಡೆ ಸಹಕರಿಸಿದರು. ಉಸ್ತಾದ್ ಖಾನ್ ಅವರ ಗಾನಕ್ಕೆ ಪೂರ್ವದಲ್ಲಿ ಪುಟ್ಟ ಮಕ್ಕಳಾದ ಶ್ರೇಯಸ್ , ಅನ್ವಿತಾ ಹಾಗೂ ಅಭಿಜ್ಞಾ ಹಾಡಿದರು. ಹಸಿರುಸಿರಿ ಮನೆಯ ಯಜಮಾನರಾದ ಜಯದೇವ ರಾವ್ ಮತ್ತು ಜಯಂತಿ ದಂಪತಿ ಕಲಾವಿದರನ್ನು ಗೌರವಿಸಿ ವಂದಿಸಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ ನಿರೂಪಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top