ಜೊಯಿಡಾ: ತಾಲೂಕಿನ ಯರಮುಖ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಮಾತೆಯರ ಸಮಾವೇಶವನ್ನು ಕೇಂದ್ರ ಮಾತೃ ಮಂಡಳ ಅಧ್ಯಕ್ಷೆ ಗೀತಾ ಹೆಗಡೆ ಶಿರಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆಯಲ್ಲಿ ಸ್ತ್ರೀಯರ ಪಾತ್ರ ಎಷ್ಟು ಮುಖ್ಯ ಹಾಗೂ ಮಹಿಳೆಯರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದರ ಬಗ್ಗೆ ತಿಳಿಸಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಎಮ್‌ಎಮ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿಯ ನಿವೃತ್ತ ಪ್ರಾಂಶುಪಾಲ ಕೋಮಲಾ ಭಟ್ಟ ಮಾತನಾಡಿ, ಮಾತೆಯರ ಅವಶ್ಯಕ ಆಚರಣೆಗಳು, ಸಾಂಪ್ರದಾಯಿಕ ಪದ್ಧತಿ ಮತ್ತು ಅದರ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಅಡುಗೆಯಲ್ಲಿ ಪರಿಣಿತಿ ಪಡೆದ ಮಹಿಳೆಯರಿಗೆ ಹಾಗೂ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಹುಡುಗಿಯರಿಗೆ ಸನ್ಮಾನವನ್ನು ಮಾಡಲಾಯಿತು. ಕಾರ್ಯಕ್ರಮವನ್ನು ಮಾತೃ ಮಂಡಳದ ಅಧ್ಯಕ್ಷೆ ಸೀತಾ ದಾನಗೇರಿ ಮತ್ತು ಗೀತಾ ಭಾಗ್ವತ ಅವರ ತಂಡದವರು ನಿರ್ವಹಿಸಿದರು. ಮಾತೆಯರ ಸಮಾವೇಶದಲ್ಲಿ 200ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.