ಗೋಕರ್ಣ: ಕುಮಟಾದಲ್ಲಿ ಜೂನ್ 3ರಂದು ನಡೆಯಲಿರುವ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಚಿಂತನಾ ಶಿಬಿರಕ್ಕೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರುವಂತೆ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದ ತಂಡ ಅವರನ್ನು ಭೇಟಿ ಮಾಡಿ ಆಹ್ವಾನಿಸಿದರು.
ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಸರಕಾರದ ವತಿಯಿಂದ ನಿಗಮ ಮಂಡಳಿ ಘೋಷಣೆ ಮಾಡುವುದರ ಜತೆಗೆ ಕುಲಶಾಸ್ತ್ರೀಯ ಅಧ್ಯಯನಕ್ಕೆ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ನಾನು ಯಾವತ್ತೂ ತಮ್ಮೊಂದಿಗೆ ಇರುತ್ತೇನೆ. ಈ ಕಾರ್ಯಕ್ರಮದಲ್ಲಿಯೂ ಕೂಡ ನಾನು ಭಾಗವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಪದಾಧಿಕಾರಿಗಳಾದ ಡಾ. ಮಂಚೇಗೌಡ ಬಿ.ಎಚ್., ಪ್ರಮುಖರಾದ ನಾಗರಾಜ ನಾಯಕ ಸಾಗರ, ಗುರುರಾಜ, ಜನಾರ್ಧನ, ಅನಿತಾ ಕೃಷ್ಣಮೂರ್ತಿ, ಸುನೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.