• Slide
    Slide
    Slide
    previous arrow
    next arrow
  • ಮುಂಗಾರು ಮಳೆ ಆರ್ಭಟ; ಗಾಳಿ,ಮಳೆಗೆ ಅಪಾರ ಹಾನಿ

    300x250 AD

    ಶಿರಸಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಸುಮಾರು ಎಪ್ಪತ್ತಕ್ಕು ಅಧಿಕ ಮರಗಳು ಮನೆ ಹಾಗೂ ರಸ್ತೆಯ ಮೇಲೆ ಉರುಳಿ ಬಿದ್ದ ಪರಿಣಾಮ ಜನಜೀವನ ಅಸ್ತವೆಸ್ತವಾಗಿದಲ್ಲದೆ ರಾತ್ರಿಯಲ್ಲ ಕತ್ತಲೆಯಲ್ಲೆ ಜನ ಕಾಲ ಕಳೆದ ಘಟನೆ ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡೆಬೈಲ್ ಗ್ರಾಮದಲ್ಲಿ ನಡೆದಿದೆ.

    ಕಳೆದ ರಾತ್ರಿ ಸುರಿದ ಬಾರಿ ಗಾಳಿ ಮಳೆಯಿಂದಾಗಿ ಸುಮಾರು ಎಪ್ಪತ್ತೈದುಕ್ಕೂ ಅಧಿಕ ಮರಗಳು ನೆಲಕ್ಕೆ ಉರುಳಿ ಬಿದ್ದಿವೆ ಕೆಲ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಏಳಕ್ಕು ಅಧಿಕ ಕಂಬಗಳು ಮುರಿದು ಬಿದ್ದವೆ ಆದರೆ ಘಟನೆ ಯಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಗ್ರಾಮದ 8ಕ್ಕು ಅಧಿಕ ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಹಾನಿ ಉಂಟಾದರೆ ಮನೆಯ ಒಳಗಡೆ ಮಳೆ ನೀರು ಹೊಕ್ಕು ಮನೆಯೊಳಗಿದ್ದ ಧವಸ ಧಾನ್ಯ ಬಟ್ಟೆ ಬರೆ ಹಾನಿಗೀಡಾಗಿವೆ ದೇವಸ್ಥಾನ, ಕೊಟ್ಟಿಗೆಗಳ ತಗಡುಗಳು ಹಾರಿಹೋಗಿವೆ. ಘಟನೆಯಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಜ್ಯೋತಿ, ಪಂಚಾಯತಿ ಕಾರ್ಯದರ್ಶಿ ಮಾರುತಿ. ಪಂಚಾಯತ ಸದಸ್ಯರಾದ ಶೋಭ ಅಣ್ಣಪ ಗೌಡ, ಶ್ವೇತ ಹೆಗಡೆ, ಶ್ರೀಧರ ಗೌಡ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು ನಂತರ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಬಸವರಾಜ್ ದೊಡ್ಮನಿ. ಕಾಂಗ್ರೆಸ್ ಮುಖಂಡರಾದ ಸಿದ್ದನಗೌಡ ಮೂಡುರು, ವಿ.ಎಮ್.ಬೈಂದೂರ ಮುಂತಾದವರು ಭೇಟಿ ನೀಡಿ ಸಂತ್ರಸ್ತರಿಗೆ ನೆರವು ನೀಡುವ ಭರವಸೆ ನೀಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top