ಅಂಕೋಲಾ: ಸೋಮವಾರ ಸಂಜೆ ತಾಲೂಕಿನಲ್ಲಿ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ಲಕ್ಷಾಂತರ ರೂ. ಹಾನಿ ಉಂಟಾಗಿರುವ ವರದಿಯಾಗಿದೆ.
ತಾಲೂಕಿನಲ್ಲಿ ಓಟ್ಟೂ 59 ಮನೆಗಳಿಗೆ ಹಾನಿ ಉಂಟಾಗಿದ್ದು, ಅದರಲ್ಲಿ 4ಮನೆಗಳು ಸಂಪೂರ್ಣ ಹಾನಿ ಆಗಿದ್ದು ಇನ್ನೂ 55 ಮನೆಗಳಿಗೆ ಬಾಗಶಃ ಹಾನಿಯಾಗಿರುತ್ತದೆ. ಅನೇಕ ಕಡೆ ಅಡಿಕೆ ತೆಂಗಿನ ಮರಗಳು ಧರೆಗುರುಳಿವೆ. ಹಾಗೆ ಭಾರಿ ಗಾತ್ರದ ಮರಗಳು ಅಲ್ಲಲ್ಲಿ ರಸ್ತೆಯ ಮೇಲೆ ಬಿದ್ದಿದೆ. ಹೆಸ್ಕಾಂನ 117 ವಿದ್ಯುತ್ ಕಂಬಗಳು ಮಳೆ ಗಾಳಿಯ ರಭಸಕ್ಕೆ ಮುರಿದು ಬಿದ್ದಿದ್ದು ಅಂದಾಜು 28.71 ಲಕ್ಷ ದಷ್ಟು ಹಾನಿಯಾಗಿದೆ ಎಂದು ಇಲಾಖೆ ವರದಿ ಮಾಡಿದೆ. ಗ್ರಾಮೀಣ ಬಾಗದಲ್ಲಿ ಹೆಚ್ಚಿನದಾಗಿ ಮರಗಳು ಬಿದ್ದು ವಿದ್ಯುತ್ ಕಂಬಕ್ಕೆ ಹಾಣಿ ಉಂಟಾಗಿದೆ. ಇದರಿಂದಾಗಿ ತಾಲೂಕಿನಲ್ಲಿ ವಿದ್ಯುತ್ ಸರಬರಾಜಿಗೆ ವ್ಯತ್ಯಯ ಉಂಟಾಗಿದ್ದು ಇಲಾಖೆ ಸಿಬ್ಬಂದಿಗಳು ಎಲ್ಲೇಡೆ ದುರಸ್ತಿ ಕಾರ್ಯ ನಡೆಸಿ ಮಂಗಳವಾರ ಸಂಜೆಯ ಹೊತ್ತಿಗೆ ವಿದ್ಯತ್ ಸಂಪರ್ಕ ಕಲ್ಪಿಸಿದ್ದಾರೆ.
ಮನೆಗಳು ಹಾನಿಯಾದ ಸ್ಥಳಕ್ಕೆ ಅಂಕೋಲಾ ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ, ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರೀ ಮಳೆಯಿಂದಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾವು ಬೆಳೆಗೂ ಹೆಚ್ಚಿನ ಹಾನಿಯಾಗಿದೆ. ಕಟಾವಿಗೆ ಬರಬೇಕಿದ್ದ ಮಾವು ಅಕಾಲಿಕ ಸುರಿದ ಮಳೆಗೆ ನೆಲಸೇರಿದೆ. ಈ ಬಾರಿ ವಿಳಂಬವಾಗಿ ಮಾವು ಫಸಲು ಬಂದಿದ್ದರಿಂದ ರೈತರಿಗೆ ಕೊಂಚ ನಿರಾಸೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಆಗಿರುವ ಬೆಳೆ ನಷ್ಟ ಅವರನ್ನು ಆತಂಕಕ್ಕೆ ಸಿಲುಕಿಸಿದೆ.