• Slide
    Slide
    Slide
    previous arrow
    next arrow
  • ನೀರಿನ ಅಭಾವ: ಕೊಳವೆ ಬಾವಿ ತೆಗೆಯಲು ವಿರೋಧ

    300x250 AD

    ಶಿರಸಿ: ನಗರದ ವಿಶಾಲನಗರದಲ್ಲಿರುವ ಪೌರಕಾರ್ಮಿಕರ ವಸತಿ ನಿಲಯಕ್ಕೆ ಕುಡಿಯುವ ನೀರಿನ ಅಭಾವ ಕಂಡು ಬಂದಿರುವುದರಿ0ದ ಅಲ್ಲಿ ನಗರಸಭೆಯಿಂದ ಕೊಳವೆ ಬಾವಿ ತೆಗೆಯಲಾಗುತ್ತಿದೆ. ಆದರೆ ಇಲ್ಲಿ ಕೊಳವೆ ಬಾವಿ ತೆಗೆಯುವುದರಿಂದ ಸುತ್ತಮುತ್ತಲಿನ ಬಾವಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಜಾಗ ನ್ಯಾಯಾಲಯದಲ್ಲಿರುವುದರಿಂದ ಕೊಳವೆ ಬಾವಿ ತೆಗೆಯಬಾರದೆಂದು ನಿವಾಸಿಗರು ಕೊಳವೆ ಬಾವಿ ತೆಗೆಯುತ್ತಿರುವದನ್ನು ನಿಲ್ಲಿಸಿದ್ದಾರೆ.

    ಪೌರಕಾರ್ಮಿಕರ ವಸತಿ ನಿಲಯವು ಸರ್ವೆ ನಂಬರ್ 80ಬ ರಲ್ಲಿದ್ದು, ಈ ಜಾಗವನ್ನು 120 ಸೈಟ್‌ಗಳನ್ನಾಗಿ ಮಾಡಿ ಹಂಚಲಾಗಿದೆ. ಈ ಜಾಗ ಹಂಚಿಕೆ ಮಾಡುವಾಗ 5 ಗುಂಟೆ ಜಾಗವನ್ನು ನರ್ಸರಿ ಶಾಲೆಗೆ ಬಿಟ್ಟುಕೊಡಲಾಗಿತ್ತು. ಆದರೆ ಆ ಜಾಗದಲ್ಲಿ ನಗರಸಭೆಯವರು ಪೌರಕಾರ್ಮಿಕರಿಗಾಗಿ ಆರು ವಸತಿ ನಿಲಯ ಕಟ್ಟಿಸಿದಲ್ಲದೇ ಮತ್ತೆರಡು ಅನಧಿಕೃತ ಕಟ್ಟಡವನ್ನು ಕಟ್ಟಲು ಯೋಜನೆ ರೂಪಿಸಿದ್ದಾರೆ. ಇದನ್ನು ತಡೆಯಲು ಜಾಗ ಹಂಚಿಕೆ ಮಾಡಿದವರು ನ್ಯಾಯಾಲಯಕ್ಕೆ ಹೋಗಿರುವಾಗಲೇ ಇಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ತೆಗೆಯುತ್ತಿದ್ದಾರೆ.

    ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು. ನಗರಸಭೆಯವರು ಅನಾಥಾಶ್ರಮ ಕಟ್ಟುತ್ತೇವೆಂದು ವಸತಿನಿಲಯ ಕಟ್ಟಿ ತಪ್ಪು ಮಾಡಿದ್ದಾರೆ. ಇದರ ಹೊರತಾಗಿಯೂ ಮತ್ತೆರಡು ಅನದಿಕೃತ ಕಟ್ಟಲು ಮುಂದಾಗಿದ್ದಾರೆ.ಈಗ ಆ ಜಾಗದಲ್ಲಿ ಕೊಳವೆ ಬಾವಿ ತೆಗೆಯುವುದರಿಂದ ಸುತ್ತಮುತ್ತಲಿನ ಬಾವಿಗಳ ಮೇಲೆ ತೀವೃತರವಾದ ಪರಿಣಾಮ ಬೀರುತ್ತದೆ. ಆದ್ದರಿಂದ ನಗರಸಭೆಯವರು ಕೂಡಲೇ ಕೊಳವೆ ಬಾವಿ ತೆಗೆಯುವದನ್ನು ನಿಲ್ಲಿಸಬೇಕೆಂದು ಈ ಭಾಗದ ನಿವಾಸಿಗರು ನಗರಸಭೆಗೆ ಮನವಿ ಮಾಡಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top